ಅಕ್ರಮ ಚಿನ್ನ ಸಾಗಾಟ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ

13/11/2020

ಮುಂಬೈ: ಅಕ್ರಮ ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕೃನಾಲ್ ಅವರು ಯುಎಇಯಿಂದ ಮುಂಬೈಗೆ ವಾಪಸ್ ಆದಾಗ ಡಿಆರ್ ಐ ಸಿಬ್ಬಂದಿ ಅವರನ್ನು ತಡೆದು ಪರಿಶೀಲನೆ ನಡೆಸಿದರು ಈ ವೇಳೆ ಅಕ್ರಮ ಚಿನ್ನ ಹಾಗೂ ಅಮೂಲ್ಯ ವಸ್ತುಗಳನ್ನು ಅವರು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕೃನಾಲ್ ಪಾಂಡ್ಯ ದುಬೈನಲ್ಲಿ ಮಂಗಳವಾರ ಕೊನೆಯಾಗಿರುವ ಐಪಿಎಲ್ ನಲ್ಲಿ ಐದನೇ ಬಾರಿಗೆ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version