Anaya Bangar: ಹೆಣ್ಣಾಗಿ ಬದಲಾದ ಕೋಚ್ ಪುತ್ರನಿಗೆ ಕ್ರಿಕೆಟಿಗರ ಕಾಟ!

ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಮಗ ಆರ್ಯನ್ ಇತ್ತೀಚೆಗೆ ಹಾರ್ಮೋನಲ್ ರಿಪ್ಲೇಸ್ ಮೆಂಟ್ ಥೆರಪಿ ಮಾಡಿಸಿಕೊಂಡು ಹೆಣ್ಣಾಗಿ ಬದಲಾದ ಸುದ್ದಿ ಭಾರೀ ಚರ್ಚೆಯಾಗಿತ್ತು. ಆರ್ಯನ್ ಬಂಗಾರ್ ಹೆಣ್ಣಾಗಿ ಬದಲಾದ ನಂತರ ಅನಯಾ ಬಂಗಾರ್ ಆಗಿದ್ದಾರೆ. ಹೆಣ್ಣಾಗಿ ಬದಲಾಗುತ್ತಿದ್ದಂತೆಯೇ ಅನಯಾ ಬಂಗಾರ್ ಗೆ ಇದೀಗ ಹೊಸ ಸಮಸ್ಯೆ ಆರಂಭವಾಗಿದೆಯಂತೆ.
ಲಿಂಗ ಬದಲಾವಣೆಯ ಬಳಿಕ ತನ್ನ ವೃತ್ತಿ ಜೀವನವನ್ನು ಮುಂದುವರಿಸಲು ಅನಯಾಗೆ ಅಡೆತಡೆ ಉಂಟಾಗಿದೆ , ಪ್ರಸ್ತುತ ಅನಯಾ ಯುನೈಟೆಡ್ ಕಿಂಗ್ ಡಂನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅವರು ನೀಡಿರುವ ಸಂದರ್ಶನದಲ್ಲಿ ಹಲವಾರು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.
ನಾನು 8 ಅಥವಾ 9 ವರ್ಷದವಳಿದ್ದಾಗ ನನ್ನ ತಾಯಿಯ ಕಪಾಟಿನಿಂದ ಬಟ್ಟೆಗಳನ್ನು ತೆಗೆದುಕೊಂಡು ಧರಿಸುತ್ತಿದೆ. ನಂತರ ಕನ್ನಡಿ ನೋಡಿಕೊಂಡು ನಾನು ಹುಡುಗಿಯಾಗುತ್ತೇನೆ ಎಂದು ಹೇಳುತ್ತಿದ್ದೆ ಎಂದಿದ್ದಾರೆ.
ನಾನು ಮುಶೀರ್ ಖಾನ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ರಂತಹ ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಆಡಿದ್ದೇನೆ. ನನ್ನ ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ಈ ರಹಸ್ಯವನ್ನು ನಾನು ಕಾಪಾಡಿಕೊಳ್ಳಬೇಕಿತ್ತು ಎಂದರು.
ಇನ್ನೂ ಕ್ರಿಕೆಟ್ ಜಗತ್ತು ಅಭದ್ರತೆಯಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಸಾಕಷ್ಟು ಚರ್ಚೆಗಳನ್ನ ಹುಟ್ಟಿ ಹಾಕಿದೆ.
ತಾನು ಹೆಣ್ಣಾಗಿ ಬದಲಾದ ನಂತರ ಕ್ರಿಕೆಟ್ ಜಗತ್ತಿನಲ್ಲಿ ಬೆಂಬಲವೂ ಸಿಕ್ಕಿದೆ, ಅದರ ಜೊತೆಗೆ ಕಿರುಕುಳವೂ ಆಗಿದೆ ಎಂದು ಅನಯಾ ಬಂಗಾರ್ ಹೇಳಿದ್ದಾರೆ. ಕೆಲವು ಕ್ರಿಕೆಟಿಗರು ನನಗೆ ಅವರ ನಗ್ನ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಅನಯಾ ಗಂಭೀರ ಆರೋಪ ಮಾಡಿದ್ದಾರೆ.
ಆ ವ್ಯಕ್ತಿ ಎಲ್ಲರ ಮುಂದೆ ನನಗೆ ಬೈಯ್ಯುತ್ತಿದ್ದ, ಆದರೆ ನಾನು ಹೆಣ್ಣಾಗಿ ಬದಲಾದ ನಂತರ ನನ್ನ ಪಕ್ಕ ಕುಳಿತು ನನ್ನ ಫೋಟೋ ಕೇಳುತ್ತಿದ್ದ. ನಾನು ಭಾರತದಲ್ಲಿದ್ದಾಗ ಅನುಭವಿ ಕ್ರಿಕೆಟಿಗನಿಗೆ ನನ್ನ ಪರಿಸ್ಥಿತಿ ಬಗ್ಗೆ ಹೇಳಿದೆ. ಆತ ಕಾರಿನಲ್ಲಿ ಹೋಗೋಣ, ನಾನು ನಿನ್ನೊಂದಿಗೆ ಮಲಗುತ್ತೇನೆ ಎಂದು ಹೇಳಿದ್ದ ಎಂದು ಅನಯಾ ಹೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD