ಅಪಾಯಕಾರಿ: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ: ಇಲ್ಲಿದೆ ಸಂಪೂರ್ಣ ಅಂಕಿಅಂಶ - Mahanayaka
3:04 AM Friday 20 - September 2024

ಅಪಾಯಕಾರಿ: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ: ಇಲ್ಲಿದೆ ಸಂಪೂರ್ಣ ಅಂಕಿಅಂಶ

rape
24/07/2023

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇಕಡಾ 30ರಷ್ಟು ಹೆಚ್ಚಳಗೊಂಡಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ ವರದಿ ನೀಡಿದೆ.

ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದಲ್ಲಿ 2021ರಲ್ಲಿ ಒಟ್ಟು 23,700 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇದು 30,957ಕ್ಕೆ ಏರಿಕೆಯಾಗಿದೆ. ಈ ದೂರುಗಳಲ್ಲಿ ಹೆಚ್ಚಿನವು ಭಾವನಾತ್ಮಕ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯದ್ದಾಗಿದೆ. ಈವರೆಗೂ 2014ರಲ್ಲಿ 33,906 ಪ್ರಕರಣಗಳು ದಾಖಲಾಗಿರುವುದು ಅತೀ ಹೆಚ್ಚಿನ ಸಂಖ್ಯೆಯಾಗಿತ್ತು.

ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಉತ್ತರಪ್ರದೇಶದಲ್ಲಿ ದಾಖಲಾಗಿದ್ದು, ಅನಂತರ ಸ್ಥಾನದಲ್ಲಿ ಹೊಸದಿಲ್ಲಿ, ಮಹಾರಾಷ್ಟ್ರ ಇದೆ. 2022ರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ 16,872 (ಶೇ. 54.5)ರಷ್ಟು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿದೆ. ದೆಹಲಿಯಲ್ಲಿ 3,004 (ಶೇ. 10), ಮಹಾರಾಷ್ಟ್ರದಲ್ಲಿ 1,381 (ಶೇ. 5), ಬಿಹಾರದಲ್ಲಿ 1,368 (ಶೇ. 4.4), ಹರಿಯಾಣದಲ್ಲಿ 1,362 (ಶೇ. 4.4), ರಾಜಸ್ಥಾನದಲ್ಲಿ 1,030 (ಶೇ. 3.3), ತಮಿಳುನಾಡಿನಲ್ಲಿ 668 (ಶೇ. 2.2), ಪಶ್ಚಿಮ ಬಂಗಾಳದಲ್ಲಿ 621 (ಶೇ. 2), ಕರ್ನಾಟಕದಲ್ಲಿ 554 (ಶೇ. 1.8) ಮತ್ತು ಉಳಿದ ರಾಜ್ಯಗಳು 2,955 (ಶೇ.9.5) ಪ್ರಕರಣಗಳು ದಾಖಲಾಗಿವೆ.


Provided by

ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಬಳಿಕ ದೇಶದ್ಯಾಂತ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಬಿಡುಗಡೆಯಾಗಿರುವ ಈ ಅಂಕಿ ಅಂಶಗಳು ದೊಡ್ಡ ಆಘಾತವನ್ನೇ ಮೂಡಿಸಿದೆ.

2022ರಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಘನತೆಯಿಂದ ಬದುಕುವ ಹಕ್ಕು (ಭಾವನಾತ್ಮಕ ನಿಂದನೆ) ವಿಭಾಗದಲ್ಲಿ ಒಟ್ಟು 9,710 ದೂರುಗಳು, ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ 6,970 ದೂರುಗಳು ಮತ್ತು ವಿವಾಹಿತ ಮಹಿಳೆಯರಿಗೆ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಅಡಿಯಲ್ಲಿ 4,600 ದೂರುಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಹೆಚ್ಚಿನ ದೂರುಗಳು ಕೌಟುಂಬಿಕ ಹಿಂಸಾಚಾರ ಮತ್ತು ಭಾವನಾತ್ಮಕ ನಿಂದನೆಗೆ ಸಂಬಂಧಿಸಿದ್ದಾಗಿದೆ ಎಂದು ಆಯೋಗದ ಅಂಕಿ ಅಂಶಗಳು ಹೇಳಿದೆ.

ಮಹಿಳೆ ಅಥವಾ ಕಿರುಕುಳದ ದೌರ್ಜನ್ಯ ವಿಭಾಗದ ಅಡಿಯಲ್ಲಿ 2,500 ಕ್ಕೂ ಹೆಚ್ಚಿನ ದೂರುಗಳನ್ನ, ಅತ್ಯಾಚಾರ/ ಅತ್ಯಾಚಾರದ ಪ್ರಯತ್ನದ ಅಡಿಯಲ್ಲಿ 1,701 ದೂರುಗಳು, ಮಹಿಳೆಯರ ಪ್ರಕರಣದಲ್ಲಿ ಪೊಲೀಸ್ ನಿರಾಸಕ್ತಿ ಅಡಿಯಲ್ಲಿ 1,623 ದೂರುಗಳು ಮತ್ತು ‘ಸೈಬರ್ ಅಪರಾಧಗಳ’ ಅಡಿಯಲ್ಲಿ 924 ದೂರುಗಳು ದಾಖಲಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ