ಅಕ್ರಮವಾಗಿ ಜಮೀನು ಖಾತೆ ಮಾಡಿಸಿಕೊಟ್ಟ ತಹಶೀಲ್ದಾರ್ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್ ಕೇಸ್!
ಚಿಕ್ಕಮಗಳೂರು: ಸರ್ಕಾರಿ ಬೀಳು ಜಮೀನನ್ನು ಅಕ್ರಮವಾಗಿ ಜನರಿಗೆ ಖಾತೆ ಮಾಡಿಕೊಟ್ಟ ಆರೋಪದಲ್ಲಿ ತಹಶೀಲ್ದಾರ್ ಉಮೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ತಹಶಿಲ್ದಾರರ್ ಉಮೇಶ್ ವಿರುದ್ದ ದೂರು ನೀಡಿದ್ದಾರೆ. ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿರುವ ಆರೋಪದ ಮೇಲೆ ದೂರು ದಾಖಲಾಗಿದೆ.
ಕಡೂರು ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಸರ್ಕಾರಿ ಬೀಳು ಜಮೀನನ್ನು ಅಕ್ರಮವಾಗಿ ಜನರಿಗೆ ಖಾತೆ ಮಾಡಿಕೊಟ್ಟಿದ್ದ ತಹಶೀಲ್ದಾರರ್ ಉಮೇಶ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಗ್ರಾಮದ ಹನುಮಯ್ಯ, ರತ್ನಮ್ಮ, ನಾರಯಾಣಪ್ಪ, ಗೌರಮ್ಮಗೆ ಖಾತೆ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದೆ.
ಸರ್ಕಾರಿ ಬೀಳು ಜಮೀನನ್ನು ತಹಶೀಲ್ದಾರ್ ಉಮೇಶ್ ನಾಲ್ವರಿಗೆ ಖಾತೆ ಮಾಡಿಕೊಟ್ಟಿದ್ದು, 5.04 ಎಕರೆ ಸರ್ಕಾರಿ ಜಮೀನನ್ನ ನಾಲ್ವರಿಗೆ ಖಾತೆ ಮಾಡಿಕೊಡಲಾಗಿತ್ತು. ಕಾನೂನಿನ ನಿಯಮಗಳನ್ನು ಗಾಳಿ ತೂರಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ.
ತಹಶೀಲ್ದಾರ್ ಉಮೇಶ್ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ಉಮೇಶ್, ಶಿರಸ್ತೆದಾರ್ ನಂಜುಂಡಯ್ಯ, ಆರ್. ಐ. ಬಸವರಾಜಪ್ಪ ವಿರುದ್ದ ಪ್ರಕರಣ ದಾಖಲಾಗಿದೆ. ಕಡೂರು ಪೊಲೀಸ್ ಠಾಣೆಗೆ ಎಸಿ ಕಾಂತರಾಜ್ ದೂರು ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಉಮೇಶ್ ಕಡೂರಿನಿಂದ ವರ್ಗಾವಣೆ ಆಗಿದ್ದಾರೆ. ಮುಂದಿನ ಕಾನೂನು ಕ್ರಮಗಳ ಬಗ್ಗೆ ಕಾದುನೋಡಬೇಕಿದೆ.