9 ಕುರಿಗಳ ಕುತ್ತಿಗೆ ಕೊಯ್ದು, 27 ಕುರಿಗಳನ್ನು ಕದ್ದ ದುಷ್ಕರ್ಮಿಗಳು!

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಸುಮಾರು 38 ಕುರಿಗಳಲ್ಲಿ 27 ಕುರಿಗಳನ್ನ ಕದ್ದು ಒಂಬತ್ತು ಕುರಿಗಳ ಕತ್ತು ಕೊಯ್ದು ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ನಡೆದಿದೆ.
ಮೂಲತಃ ಚಿಕ್ಕಮಗಳೂರು ಮೂಲದ ದಿನಕರ್ ಎಂಬುವರು ಕುರಿ ಸಾಕಾಣಿಕೆ ಮಾಡುತ್ತಿದ್ದರು. ಕಳೆದ ರಾತ್ರಿ ಕುರಿಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿ ಮನೆಗೆ ಬಂದು ಬೆಳಗ್ಗೆ ಹೋಗುವಷ್ಟರಲ್ಲಿ ಕೊಟ್ಟಿಗೆ ತುಂಬಾ ಕುರಿಗಳ ಮಾರಣ ಹೋಮ ನಡೆದಿದೆ.
38 ಕುರಿಗಳ ಪೈಕಿ 27 ಕುರಿಗಳನ್ನ ಕದ್ದಿದ್ದಾರೆ. ಒಂಬತ್ತು ಕುರಿಗಳ ಕತ್ತನ್ನ ಕೊಯ್ದು ಅಲ್ಲೇ ಬಿಟ್ಟು ಹೋಗಿದ್ದಾರೆ. 39ರಲ್ಲಿ ಕೇವಲ ಮೂರು ಕುರಿಗಳು ಮಾತ್ರ ಜೀವಂತವಾಗಿದೆ. ಆದರೆ, ಸುಮಾರು 4 ಲಕ್ಷ ಮೌಲ್ಯದ 36 ಕುರಿಗಳನ್ನ ಕಳೆದುಕೊಂಡಿರೋ ದಿನಕರ್ ಕಣ್ಣೀರಿಟ್ಟಿದ್ದಾರೆ.
ಒಂಬತ್ತು ಕುರಿಗಳನ್ನ ಒಂದೇ ಗುಂಡಿಯಲ್ಲಿ ಎಲ್ಲವನ್ನೂ ಮಣ್ಣು ಮಾಡಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw