ಪ್ರಧಾನಿ ಅದ್ಧೂರಿ ರೋಡ್ ಷೋಗೆ ಜನಸಾಗರ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಳೂರು ಮಹಾನಗರದ ಎರಡನೇ ದಿನದ ರೋಡ್ ಷೋ ಇಂದು ನ್ಯೂ ತಿಪ್ಪಸಂದ್ರ ರಸ್ತೆಯ ಕೆಂಪೇಗೌಡ ಪ್ರತಿಮೆ ಬಳಿಯಿಂದ ಆರಂಭಗೊಂಡಿತು. ‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ರೋಡ್ ಷೋವು ಅಪಾರ ಜನರನ್ನು ತನ್ನತ್ತ ಸೆಳೆಯಿತು.
ಎಚ್‍ಎಎಲ್ 2ನೇ ಹಂತದ 80 ಅಡಿ ಜಂಕ್ಷನ್, ಎಚ್‍ಎಎಲ್ 2ನೇ ಹಂತದ 12ನೇ ಮುಖ್ಯ ರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ, ಟ್ರಿನಿಟಿ ಸರ್ಕಲ್ ವರೆಗೆ ಈ ರೋಡ್ ಷೋ ಸಾಗಿತು.
ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ರೋಡ್ ಷೋ ಆರಂಭವಾಗಿದ್ದು, ಜನಸಾಗರವು ಅತ್ಯುತ್ಸಾಹ, ಸಂಭ್ರಮೋಲ್ಲಾಸದೊಂದಿಗೆ ಸೇರಿದ್ದು ಕಂಡುಬಂತು. ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ‘ಭಾರತ್ ಮಾತಾ ಕಿ ಜೈ’ ‘ಮೋದಿ ಮೋದಿ’ ಎಂದು ಕೂಗುತ್ತ, ಹೂವಿನ ಸುರಿಮಳೆಗೈಯುತ್ತ ನರೇಂದ್ರ ಮೋದಿಯವರ ರೋಡ್ ಷೋವನ್ನು ಸ್ವಾಗತಿಸಿದರು. ಮೋದಿಯವರನ್ನು ಹತ್ತಿರದಿಂದ ಕಾಣಲು ಈ ರಸ್ತೆಯುದ್ದಕ್ಕೂ ಮಕ್ಕಳು, ಹಿರಿಯರು ಸೇರಿ ಅಭಿಮಾನಿಗಳು, ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw