ಹುಷಾರ್: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ್ಳು ಸುಂದರಿ; ಮಾದಕ ಬೆಡಗಿಯ ಮೋಹಕ್ಕೆ ಬಿದ್ದು 1 ಕೋಟಿ ಕಳೆದುಕೊಂಡ ಇಂಜಿನಿಯರ್..!
ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು
ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ಮಹಿಳೆಯಿಂದ ಒಂದು ತಿಂಗಳಲ್ಲಿ 1 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕುಲದೀಪ್ ಪಟೇಲ್, ವಂಚನೆಗೊಳಗಾದ ವ್ಯಕ್ತಿ. ಕುಲದೀಪ್ ಪಟೇಲ್ ಪ್ರತಿಷ್ಠಿತ ಮ್ಯಾಟ್ರಿಮೋನಿವೊಂದರಲ್ಲಿ ಅದಿತಿ ಎಂಬ ಹೆಸರಿನ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆ ಯುಕೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಳು. ದಿನ ಕಳೆದಂತೆ ಕುಲದೀಪ್‌ನ ನಂಬಿಕೆ ಗಳಿಸಿದ ವಂಚಕಿ ತನ್ನದೇ ಸ್ವಂತ ಕಂಪನಿ ಇರುವುದಾಗಿ ಬಿಂಬಿಸಿಕೊಂಡಿದ್ದಾಳೆ.
ಕುಲದೀಪ್‌ನ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರ ಜಾಲ ಕ್ರಿಪ್ಟೋ ಕರೆನ್ಸಿ ಮಾದರಿಯ ಬ್ಯಾನೋಕಾಯಿನ್ನಲ್ಲಿ ಹೂಡಿಕೆ ಮಾಡುವಂತೆ ಮನ ಒಲಿಸಿದ್ದಾರೆ. ಆಕೆಯ ಮಾತನ್ನು ನಂಬಿದ ಕುಲದೀಪ್ ಆಕೆ ಹೇಳಿದಂತೆ ಹೂಡಿಕೆ ಮಾಡಲು ಶುರು ಮಾಡಿದ್ದು, 1.34 ಕೋಟಿ ರೂಪಾಯಿ ಹೂಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ಮುಂದಾದಾಗ ತಮ್ಮ ಬ್ಯಾನೋಕಾಯಿನ್ ಖಾತೆಯನ್ನು ಫ್ರೀಜ್ ಮಾಡಿರುವುದಾಗಿ ವಂಚಕಿ ಹೇಳಿದ್ದಾಳೆ. ಈ ಬಗ್ಗೆ ಪರಿಶೀಲಿಸಿದಾಗ ಆತ ಮೊಸ ಹೋಗಿರುವುದು ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕುಲದೀಪ್ ನೀಡಿದ ದೂರಿನ ಮೇರೆಗೆ ವಂಚಕರ ವಿರುದ್ದ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ.