ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ: ಘೋಷಣೆ ಕೂಗಿದ ಅಭಿಮಾನಿಗಳು: ಶುರುವಾಯ್ತು ಹೊಸ ಚರ್ಚೆ! - Mahanayaka

ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ: ಘೋಷಣೆ ಕೂಗಿದ ಅಭಿಮಾನಿಗಳು: ಶುರುವಾಯ್ತು ಹೊಸ ಚರ್ಚೆ!

c t ravi
26/03/2023

ಚಿಕ್ಕಮಗಳೂರು :  ಸಿ.ಟಿ.ರವಿ ಮುಖ್ಯಮಂತ್ರಿ ಆಗಲೆಂದು  ಅಭಿಮಾನಿಗಳ ಪಾದಯಾತ್ರೆ ನಡೆಸಿದ್ದು, ಮುಂದಿನ ಸಿಎಂ ಸಿ.ಟಿ.ರವಿ ಎಂದು ಅವರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಸುಮಾರು 300ಕ್ಕೂ ಅಧಿಕ ಅಭಿಮಾನಿಗಳು ಪಾದಯಾತ್ರೆ ನಡೆಸಿದ್ದು,  ಚಿಕ್ಕಮಗಳೂರು ನಗರದಿಂದ ಕುಮಾರಗಿರಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.

ಸಿ.ಟಿ.ರವಿ ಮನೆಗೆ ಬಂದ ಅಭಿಮಾನಿಗಳು ಬೆಳ್ಳಿಯ ಬಾಣ ತೆಗೆದುಕೊಂಡು  ಮಲ್ಲೇನಹಳ್ಳಿ ಸಮೀಪವಿರುವ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಸಿ.ಟಿ.ರವಿ ಅಭಿಮಾನಿಗಳು ತೆರಳಿದ್ದು, ಸುಬ್ರಹ್ಮಣ್ಯಸ್ವಾಮಿಗೆ ಬೆಳ್ಳಿಯ ಬಾಣ ನೀಡಿ ಸಿ.ಟಿ.ರವಿ ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನಿಗಳು ಬೇಡಿಕೊಂಡರು.

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಹುದ್ದೆಗಾಗಿ ಪೈಪೋಟಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಬಿಜೆಪಿಯಲ್ಲಿ ಕೂಡ ಸಿಎಂ ಹುದ್ದೆಗೆ ಪೈಪೋಟಿ ಆರಂಭವಾಗಿದೆ.  ಬಿಜೆಪಿಯಲ್ಲಿ ಕೂಡ ಮುಂದಿನ ಮುಖ್ಯಮಂತ್ರಿಯಾರಾಗಬೇಕು ಅನ್ನೋ ಬಗ್ಗೆ ಇದೀಗ ಹೊಸ ಚರ್ಚೆ ಆರಂಭವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ