ನಾಯಿಯಂತೆ ಬಾಲ ಅಲ್ಲಾಡಿಸಿ ಬರೋದು ಕಾಂಗ್ರೆಸ್ ಕಲ್ಚರ್: ಸಿ.ಟಿ.ರವಿ

ct ravi
04/01/2023

ಚಿಕ್ಕಮಗಳೂರು:  ನಾಯಿಯಂತೆ ಬಾಲ ಅಲ್ಲಾಡಿಸಿ ಕುಂಯಿ…ಕುಂಯಿ.. ಅಂತ ಬರೋದು ಕಾಂಗ್ರೆಸ್ ಕಲ್ಚರ್,  ಕಾಂಗ್ರೆಸ್ಸಿಗರು ಯಾವ ಪದ ಬಳಸಿದ್ದಾರೋ ಅದು ಕಾಂಗ್ರೆಸ್ಸಿಗೆ ಅನ್ವಯವಾಗುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿಯವರ ಮುಂದೆ ಸಿಎಂ ಬಸವರಾಜ್ ಬೊಮ್ಮಾಯಿ ನಾಯಿಥರ ಮುದುಡಿಕೊಂಡಿರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ಸಿನಲ್ಲಿ ಮಾತ್ರ ಮುಖ್ಯಮಂತ್ರಿಯನ್ನ ಆ ರೀತಿ ನಡೆಸಿಕೊಳ್ಳುವುದು. ಮುಖ್ಯಮಂತ್ರಿಗಳನ್ನ ಬಾಲ ಅಲುಗಾಡಿಸುವಂತೆ ನೋಡಿಕೊಳ್ಳುತ್ತಿದ್ದದ್ದು ಕಾಂಗ್ರೆಸ್ ಮಾತ್ರ ಎಂದರು.

ವೀರೇಂದ್ರ ಪಾಟೀಲ್ ರಾಜ್ಯ ಕಂಡ ಅಪರೂಪದ, ಪ್ರಭಾವಿ ನಾಯಕ . ಅವರು ಆಸ್ಪತ್ರೆಯಲ್ಲಿದ್ದಾಗ ನೋಡಿಕೊಂಡು ಹೋಗಿ ರಾಜೀವ್ ಗಾಂಧಿ ಏರ್ ಪೋರ್ಟ್‍ನಲ್ಲಿ ಪದಚ್ಯುತಿಗೊಳಿಸಿದ್ದರು. ಆದರೆ, ಮುಖ್ಯಮಂತ್ರಿಗಳು ಆಡಳಿತ ಪಾಲುದಾರರು ಎಂದು ಪ್ರಧಾನಿ ಮೋದಿ ಭಾವಿಸುತ್ತಾರೆ  ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್ ಕಲ್ಚರ್ ಬಿಜೆಪಿಯಲ್ಲಿದೆ ಎಂದು ಸಿದ್ದರಾಮಯ್ಯ ಭಾವಿಸಿರಬಹುದು, ಅದು ತಪ್ಪು ಕಲ್ಪನೆ ಎಂದು ಅವರು ತಿರುಗೇಟು ನೀಡಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version