ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಸಚಿವರಿಂದಲೇ ವಿರೋಧ!
ಬೆಂಗಳೂರು: ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿರುವ ನಿರ್ಧಾರಕ್ಕೆ ಹಲವು ಸಚಿವರು ಸಂಪುಟ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜನವರಿ 4ರಂದು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಜ.19 ರವರೆಗೂ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಸಚಿವರ ತೀವ್ರ ವಿರೋಧದ ಕಾರಣದಿಂದ ನಿರ್ಬಂಧಗಳ ಸಡಿಲಿಕೆ ಕುರಿತು ಜ.14 ಅಥವಾ 15ರಂದೇ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯದಾದ್ಯಂತ ಬಿಗಿ ಕ್ರಮಗಳ ಜಾರಿಗೆ ಹಲವು ಸಚಿವರು ಆಕ್ಷೇಪಿಸಿದರು. ಸೋಂಕಿನ ಪ್ರಮಾಣಜಾಸ್ತಿ ಇರುವೆಡೆ ಇಂತಹ ಕ್ರಮಗಳು ಇರಲಿ, ಸೋಂಕು ಇಲ್ಲದ ಕಡೆ ಬಿಗಿ ಕ್ರಮ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಲಿರುವ ಪಾದಯಾತ್ರೆಗೂ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೂ ಸಂಬಂಧವಿಲ್ಲ. ಈಗ ಮೇಕೆದಾಟು ಸಂಪರ್ಕಿಸುವ ರಸ್ತೆಗೆ ಸೀಮಿತವಾಗಿ ನಿರ್ಬಂಧ ಜಾರಿಗೊಳಿಸಲಾಗಿದೆಯೇ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಕಿಂಗ್ ನ್ಯೂಸ್: ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ
ಕಳೆದ 24 ಗಂಟೆಗಳಲ್ಲಿ 91,೦೦೦ ಹೊಸ ಕೊರೊನಾ ಕೇಸ್ ದಾಖಲು!
ಕಾರಿನಲ್ಲಿಯೇ ಉದ್ಯಮಿಯನ್ನು ಕೊಚ್ಚಿ ಭೀಕರ ಹತ್ಯೆ
ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್
ಜಡೆಯಿಂದ ಡಬಲ್ ಡಕರ್ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ ಮಹಿಳೆ