ಶಾಕಿಂಗ್ ನ್ಯೂಸ್: ಸೈಬರ್ ಸೆಂಟರ್ ನಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ
ಕನೌಜ್: ಸೈಬರ್ ಸೆಂಟರ್ ಗೆ ತೆರಳಿದ್ದ ಇಬ್ಬರು ಬಾಲಕಿಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಸೋಮವಾರ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಬಾಲಕಿಯರನ್ನು ಅತ್ಯಾಚಾರ ಮಾಡಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಲಾಗಿತ್ತು ಎನ್ನುವುದು ತಿಳಿದು ಬಂದಿದೆ.
ಸೆ.13ರಂದು 17 ವರ್ಷ ವಯಸ್ಸಿನ ಇಬ್ಬರು ಬಾಲಕಿಯರು ಸೈಬರ್ ಸೆಂಟರ್ ಗೆ ಹೋಗಿದ್ದು, ಈ ವೇಳೆ ಅವರನ್ನು ನಾಲ್ವರು ಆರೋಪಿಗಳು ಒತ್ತೆಯಾಳುಗಳಾಗಿ ಇರಿಸಿಕೊಂಡು ಅತ್ಯಾಚಾರ ನಡೆಸಿದ್ದಾರೆ. ಅವರಲ್ಲೊರ್ವ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ. ಬಳಿಕ 10 ಸಾವಿರ ರೂಪಾಯಿ ಕೊಡುವಂತೆ ಬಾಲಕಿಯರಿಗೆ ಧಮ್ಕಿ ಹಾಕಿದ್ದಾರೆ. ಇಲ್ಲವಾದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿಯೂ ಹೇಳಿದ್ದಾರೆ. ಇದರಿಂದ ಬೆದರಿದ ಬಾಲಕಿಯರು ತಮ್ಮ ಮನೆಯಿಂದ ಹಣ ಕಳವು ಮಾಡಿ ಆರೋಪಿಗಳಿಗೆ ನೀಡಿದ್ದರು.
ಇನ್ನೂ ಅತ್ಯಾಚಾರ ನಡೆಸಿದ ಆರೋಪಿಗಳ ಪೈಕಿ ಓರ್ವನ ಪತ್ನಿ ಇದೇ ಬಾಲಕರಿಯರಿಗೆ ಕರೆ ಮಾಡಿ ವೇಶ್ಯಾವಾಟಿಕೆ ನಡೆಸುವಂತೆ ಮತ್ತೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದೇ ವೇಳೆ ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಾಕೆಯ ಮನೆಯಲ್ಲಿ ಹಣ ಕಳವಾಗಿರುವುದು ತಿಳಿದು ಬಂದಿದ್ದು, ಪುತ್ರಿಯನ್ನು ಅವರು ಖಡಕ್ ಆಗಿ ವಿಚಾರಿಸಿದಾಗ ಈ ಎಲ್ಲ ಘಟನೆಗಳು ಕೂಡ ಬೆಳಕಿಗೆ ಬಂದಿದೆ.
ಈ ಸಂಬಂಧ ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ, ಮಹಿಳೆ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಸರ್ದಾರ್ ಕೊತ್ವಾಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ ಪಿ) ಪ್ರಶಾಂತ್ ವರ್ಮಾ ಹೇಳಿದ್ದಾರೆ.
ಇನ್ನೂ ಆರೋಪಿಗಳು ಸೈಬರ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಇದೀಗ ಅನುಮಾನ ಮೂಡಿದ್ದು, ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳಿಗೆ ನಂಟಿರುವ ಎಲ್ಲ ಪ್ರದೇಶಗಳನ್ನು ಜಾಲಾಡಿ ತನಿಖೆ ನಡೆಸಲು ಮುಂದಾಗಿದ್ದಾರೆ. ಇದರಿಂದಾಗಿ ವೇಶ್ಯಾವಾಟಿಕೆ ಜಾಲವೊಂದು ಬಯಲಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಜೆಡಿಎಸ್ ನ್ನು ಸಿದ್ದರಾಮಯ್ಯ ಮಾತ್ರವಲ್ಲ, ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ | ಹೆಚ್.ಡಿ.ದೇವೇಗೌಡ ಗುಡುಗು
ಚೆಕಪ್ ಗೆ ಹೋದ ಮಹಿಳೆಯ ವಸ್ತ್ರ ಕಳಚಿ ಲೈಂಗಿಕ ಕಿರುಕುಳ | ವೈದ್ಯ ಅರೆಸ್ಟ್
ನಿಧಿಗಾಗಿ ತನ್ನ ಪತ್ನಿಯನ್ನೇ ನರಬಲಿ ನೀಡಲು ಮುಂದಾದ ಪತಿ!
ಹೌದು ಇದು ಶೋಷಿತ ಜನರಿಂದ ಪ್ರಾಯೋಜಿತ ಮುಷ್ಕರ !
ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಡಿಸಿಪಿಯ ಕಾಲಿನ ಮೇಲೆ ಹರಿದ ಕಾರು!
ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿಯಲ್ಲಿ ಎಸೆದು ಹೋದ ಕಾಮುಕರು
ಬಿಜೆಪಿಯ ಅಧಿಕಾರವಧಿಯಲ್ಲಿ ಹಿಂದುತ್ವ ಅಪಾಯದ ಸ್ಥಿತಿಯಲ್ಲಿದೆ | ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ