ಕರಾವಳಿ ಪ್ರದೇಶಗಳಿಗೆ ಎರಡೇ ದಿನದಲ್ಲಿ ಅಪ್ಪಳಿಸಲಿದೆ ಬಿಪೋರ್ ಜಾಯ್ ಚಂಡಮಾರುತ
ಬಿಪೋರ್‌ಜಾಯ್ ಚಂಡಮಾರುತ ಈ ವಾರ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ. ಅರೇಬಿಯನ್ ಸಮುದ್ರದಿಂದ, ಬಿಪೋರ್‌ಜಾಯ್ ಚಂಡಮಾರುತವು ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯ ಮತ್ತು ಗುಜರಾತ್ ಕರಾವಳಿಗೆ ಅಪ್ಪಳಿಸಲಿದ್ದು ಇದು ಗುರುವಾರ ಅಪ್ಪಳಿಸಲಿದೆ. ಈ ಹೊತ್ತಲ್ಲಿ ಇದು ಗರಿಷ್ಠ ಗಾಳಿಯ ವೇಗ ಗಂಟೆಗೆ 150 ಕಿ.ಮೀ ಹೊಂದಿರುತ್ತದೆ.
ಅತ್ಯಂತ ತೀವ್ರವಾದ ಚಂಡಮಾರುತ ಎಂದು ವರ್ಗೀಕರಿಸಲಾದ ಬಿಪೋರ್‌ಜಾಯ್ ಗುರುವಾರ ಸಂಜೆ ಗುಜರಾತ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಅಪ್ಪಳಿಸುವ ನಿರೀಕ್ಷೆ ಇದೆ. ಈ ಹೊತ್ತಲ್ಲಿ ಇದು ಗರಿಷ್ಠ 125-135 ಕಿಮೀ ವೇಗದಿಂದ ಹಿಡಿದು 150 ಕಿಮೀ ವೇಗದ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ.
ಜೂನ್ 15 ರ ಸಂಜೆಯ ವೇಳೆಗೆ ಬಿಪೋರ್‌ಜಾಯ್ ಗುಜರಾತ್‌ನ ಜಖೌ ಬಂದರನ್ನು ಅತಿ ತೀವ್ರ ಸೈಕ್ಲೋನಿಕ್ ಸ್ಟಾರ್ಮ್ ಆಗಿ ದಾಟಲಿದೆ ಎಂದು ಹೇಳಿದೆ.
ಜೂನ್ 15 ರಂದು, ಗುಜರಾತ್‌ನ ದ್ವಾರಕಾ, ಜಾಮ್‌ನಗರ, ಕಚ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 125-135 ಕಿಮೀ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತದೆ, ಇದು ವ್ಯಾಪಕ ಹಾನಿಯುಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಪೋರಬಂದರ್, ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಕಚ್‌ವರೆಗಿನ ಗಾಳಿಯ ವೇಗ ಬುಧವಾರ ಗಂಟೆಗೆ 65-75 ಕಿಮೀ ವೇಗದಲ್ಲಿ ಏರಲಿದೆ.
ಕಳೆದ ವಾರವಷ್ಟೇ ಕಡಿಮೆ ಒತ್ತಡದ ಪ್ರದೇಶದಿಂದ ಹುಟ್ಟಿಕೊಂಡ ಬಿಪೋರ್‌ಜಾಯ್ ಮತ್ತೆ ತೀವ್ರತೆ ಪಡೆದುಕೊಂಡಿತ್ತು. ಅಂದಹಾಗೆ ಇತ್ತೀಚಿನ ದಶಕಗಳಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಅತ್ಯಂತ ಚಂಡಮಾರುತಗಳಲ್ಲಿ ಇದು ಒಂದಾಗಿದೆ. ಬಿಪೋರ್‌ಜಾಯ್ ಅಪ್ಪಳಿಸಿದರೆ ಇದು ಹೆಚ್ಚಿನ ಆಪತ್ತು ಉಂಟು ಮಾಡುವ ಸಾಧ್ಯತೆ ಇದೆ.
ಚಂಡಮಾರುತದ ನೀರಿನ ನಂತರ ಭೂಮಿಗೆ ಚಲಿಸಿದಾಗ ಉಂಟಾಗುವ ಪ್ರಕ್ರಿಯೆಯೇ ಇದು. ಚಂಡಮಾರುತ ಅಪ್ಪಳಿಸುವ ಗಂಟೆಗಳ ಮೊದಲು ಮಳೆ ಮತ್ತು ಧೂಳಿನ ಬಿರುಗಾಳಿ ಎಬ್ಬಿಸುತ್ತದೆ. ಹೀಗೆ ಅಪ್ಪಳಿಸಿದಾಗ ಭಾರೀ ಗಾಳಿ,ಜೋರು ಮಳೆ, ಸಮುದ್ರ ಮಟ್ಟವನ್ನು ಹೆಚ್ಚಳವಾಗುವುದರಿಂದ ಸಮುದ್ರ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw