ನಿವಾರ್ ಚಂಡಮಾರುತದ ಬಳಿಕ ಮತ್ತೊಮ್ಮೆ ಅಪ್ಪಳಿಸಲಿದೆ ಚಂಡಮಾರುತ - Mahanayaka
12:44 AM Wednesday 11 - December 2024

ನಿವಾರ್ ಚಂಡಮಾರುತದ ಬಳಿಕ ಮತ್ತೊಮ್ಮೆ ಅಪ್ಪಳಿಸಲಿದೆ ಚಂಡಮಾರುತ

01/12/2020

ನವದೆಹಲಿ: ನಿವಾರ್ ಚಂಡಮಾರುತವನ್ನು ಎದುರಿಸಿದ ತಮಿಳುನಾಡಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು,  ಈ ವಾರದಲ್ಲಿ ಎರಡನೇ ಬಾರಿಗೆ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಡಿಸೆಂಬರ್ 2ರ ಸಂಜೆ ಅಥವಾ ರಾತ್ರಿ ವೇಳೆ ಶ್ರೀಲಂಕಾ ಕರಾವಳಿಯಲ್ಲಿ ಗಂಟೆಗೆ 75-85 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದೆ.  ಗಂಟೆಗೆ 95 ಕಿ.ಮೀ. ವೇಗದ ವರೆಗೂ ಈ ಚಂಡ ಮಾರುತ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್ 3ರಂದು  ಮನ್ನಾರ್ ಕೊಲ್ಲಿ ಮತ್ತು ಸಮೀಪದ ಕೊಮೊರಿನ್ ಪ್ರದೇಶಕ್ಕೆ ಚಂಡಮಾರುತ ಚಲಿಸುವ ಸಾಧ್ಯತೆ ಇದೆ. ಆ ಬಳಿಕ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಸಾಗಿ ತಮಿಳುನಾಡಿನ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ. ಈ ಚಂಡಮಾರುತ ಕನ್ಯಾಕುಮಾರಿ ಮತ್ತು ಪಂಬನ್ ನಡುವೆ ಡಿಸೆಂಬರ್ 4ರಂದು ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇತ್ತೀಚಿನ ಸುದ್ದಿ