ಡಿ.ಕೆ.ಶಿವಕುಮಾರ್ ಗೆ ಗ್ರಾನೈಟ್, ಲೂಟಿ, ಮರ್ಡರ್ ಬಗ್ಗೆ ಜ್ಞಾನವಿದೆ, ನೀರಿನ ಬಗ್ಗೆ ಜ್ಞಾನವಿಲ್ಲ: ಬಿಎಸ್ ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಾಗ್ದಾಳಿ - Mahanayaka
1:57 PM Wednesday 23 - October 2024

ಡಿ.ಕೆ.ಶಿವಕುಮಾರ್ ಗೆ ಗ್ರಾನೈಟ್, ಲೂಟಿ, ಮರ್ಡರ್ ಬಗ್ಗೆ ಜ್ಞಾನವಿದೆ, ನೀರಿನ ಬಗ್ಗೆ ಜ್ಞಾನವಿಲ್ಲ: ಬಿಎಸ್ ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಾಗ್ದಾಳಿ

krishna murthi
21/09/2023

ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಖಾತೆ ಕೊಡಬಾರದಿತ್ತು ಎಂದು ಬಿಎಸ್ ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ಗ್ರಾನೈಟ್, ಲೂಟಿ, ಮರ್ಡರ್ ಗಳ ಬಗ್ಗೆ ಹೆಚ್ಚು ಜ್ಞಾನವಿದೆ, ನೀರಿನ ಸಂಬಂಧ ಬಗ್ಗೆ ಅವರಿಗೆ ಜ್ಞಾನವಿಲ್ಲ. ನೀರು ಬಿಡಬೇಕೆಂದು ಸಲಹಾ ಮಂಡಲಿ ನಿರ್ದೇಶನ ನೀಡಿದಾಗ ನೀರು ಬಿಡದೇ ಸರ್ವಪಕ್ಷ ಸಭೆ ಕರೆದು ಒಮ್ಮತದ ತೀರ್ಮಾನ ತೆಗೆದುಕೊಂಡು ನೀರು ಬಿಡಬಾರದಾಗಿತ್ತು. ಆದರೆ, ಮೊದಲೆಲ್ಲಾ ನೀರು ಹರಿಸಿ ಬಳಿಕ ಸುಪ್ರೀಂ ಕೋರ್ಟ್ ಕದ ತಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಿದೇ ಇರುವುದರಿಂದ ಪ್ರತಿಬಾರಿಯೂ ಹಿನ್ನಡೆ ಉಂಟಾಗಿದೆ. ಇನ್ನು, ರಾಜ್ಯದಿಂದ ಆಯ್ಕೆಯಾಗಿರುವ ಎಂಪಿಗಳು ಕೂಡ ಪ್ರಧಾನಿ ಬಳಿ ಮಾತನಾಡದೇ ಇರುವುದರಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳಿಂದ ಕಾವೇರಿ ಸಂಕಷ್ಟ ಉಂಟಾಗಿದೆ, ಬಿಎಸ್ ಪಿ ಯಾವಾಗಲೂ ರೈತರ ಪರ, ನಾಡಿನ ಪರ ಧ್ವನಿ ಎತ್ತಲಿದೆ ಎಂದರು.

ಇತ್ತೀಚಿನ ಸುದ್ದಿ