ಡಿ.ಕೆ.ಶಿವಕುಮಾರ್ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ: ಆರ್.ಅಶೋಕ್
ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಸಿಎಂ ಅಲ್ಲ, ಆಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ, ಡಿಕೆಶಿ ಅವರದ್ದು ಒಂದು ರೀತಿ ಅತಿರೇಕದ ನಡೆ ಎಂದು ಚಿಕ್ಕಮಗಳೂರಿನಲ್ಲಿ ಆರ್.ಅಶೋಕ್ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಬಿಟ್ಟುಕೊಡಲ್ಲ, ನಂಗೆ ಸಿಎಂ ಸ್ಥಾನ ಸಿಗಲ್ಲ ಅನ್ನೋ ಗ್ಯಾರಂಟಿ ಇದೆ. ಈಗಿನಿಂದಲೇ ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಹೊರಟಿದ್ದಾರೆ, ಕಿರಿಕಿರಿ ಬೀದಿಗೆ ಬಂದರೆ ಈ ಸರಕಾರ ಬಿದ್ದು ಹೋಗುತ್ತೆ ಎಂದು ಅವರು ಭವಿಷ್ಯ ನುಡಿದರು.
ಇನ್ನೂ ಡಿಕೆಶಿ ಬಸವರಾಜ್ ಬೊಮ್ಮಾಯಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಆದವರು ಹಿಂದಿನ ಸಿಎಂರನ್ನ ಭೇಟಿ ಮಾಡೋದು ಮಾಮೂಲಿ, ನಾನು ಡಿಸಿಎಂ ಆಗಿದ್ದೆ, ನಿವೃತ್ತ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದರು.
ವಿಪಕ್ಷ ನಾಯಕ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 3ನೇ ತಾರೀಖು ವಿಪಕ್ಷ ನಾಯಕನನ್ನ ಅನೌನ್ಸ್ ಮಾಡುತ್ತಾರೆ ಎಂದರು.
ಅಧಿಕಾರ ಕಳೆದುಕೊಂಡ ಬಿಜೆಪಿ ಸೋಲಿನ ಬಗ್ಗೆ ಆರ್.ಅಶೋಕ್ ನೋವು ತೋಡಿಕೊಂಡಿದ್ದು, ಎರಡು ಕಡೆ ನಿಂತಿರುವುದು ಸರಿಯೋ ತಪ್ಪೋ ಗೊತ್ತಿಲ್ಲ, ಪಕ್ಷ ನಿಲ್ಲಲು ಹೇಳಿತ್ತು, ಪಕ್ಷದ ಶಿಸ್ತಿನ ಸಿಪಾಯಿ, ಹಾಗಾಗಿ ನಿಂತೆ. ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡ ಇಲ್ಲ, ಕನಕಪುರದಲ್ಲಿ 75 ವರ್ಷದಲ್ಲಿ 5,000 ಮತ ದಾಟಿಲ್ಲ, ಹೋರಾಟ ಮಾಡಿ 19,500 ಮತ ತೆಗೆದುಕೊಂಡಿದ್ದೇನೆ. ಈ ಸೋಲು ಬಿಜೆಪಿಗೆ ಸಾಂದರ್ಭಿಕ ಸೋಲು ಅಷ್ಟೇ ಎಂದರು.
ಒಳಮೀಸಲಾತಿ, ಎಸ್ಟಿಗಳಿಗೆ 5% ಮೀಸಲಾತಿ ಜಾಸ್ತಿ ಮಾಡಿದ್ದು, ಯಾರಿಗೆ ಬೆನಿಫಿಟ್ ಸಿಕ್ಕಿದ್ಯೋ ಅವರು ನಮ್ಮ ಜೊತೆ ನಿಂತರೋ ಇಲ್ವೋ ಗೊತ್ತಿಲ್ಲ, ಯಾರಿಗೆ ಸೌಲಭ್ಯ ಸಿಕ್ಕಿಲ್ಲ ಅವರು ನಮ್ಮ ವಿರುದ್ಧ ಇರೋದು ಕಾಣುತ್ತಿದೆ. ಮೀಸಲಾತಿ ಹೊಡೆತ ಬಿದ್ದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಇದನ್ನೆಲ್ಲಾ ಚರ್ಚೆ ಮಾಡ್ತೀವಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw