ಸಿದ್ದರಾಮಯ್ಯನವರನ್ನು ಹೆದರಿಸಲು ಡಿಕೆಶಿ ಹಿಂದುತ್ವದ ವೇಷ ಧರಿಸಿದ್ದಾರೆ: ಮುನಿರತ್ನ ವಾಗ್ದಾಳಿ

28/02/2025
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನ್ನು ಹೆದರಿಸಲು ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಕೆಶಿ ಹಿಂದೂ ಅಲ್ಲ ಅಂತ ನಾವು ಹೇಳಿಲ್ಲ, ಅವರು ಹಿಂದೂನೇ… ಹಿಂದೂ ಆಗಿಯೇ ಸಾಯಲಿ, ಆದ್ರೆ, ಸಿದ್ದರಾಮಯ್ಯ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲು ಹಿಂದುತ್ವ ವೇಷ ಹಾಕಿದ್ದಾರೆ ಎಂದು ಅವರು ಟೀಕಿಸಿದರು.
ಡಿಕೆಶಿ ಬಿಜೆಪಿಗೆ ಬಂದ್ರೆ ಕುಕ್ಕರ್ ಬಾಂಬ್ ಇಟ್ಟ ಬ್ರದರ್ಸ್ ಆ್ಯಂಡ್ ಸಿಸ್ಟರ್ಸ್ ಗೆ ಕೋಪ ಬರುವುದಿಲ್ಲವೇ? ಏಸು ಬೆಟ್ಟದವರು ಕೋಪ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಿದ್ರೆ ಇವರು ಏಕನಾಥ್ ಶಿಂಧೆ ಆಗಲ್ಲ ಏಕ ವ್ಯಕ್ತಿ ಆಗ್ತಾರೆ ಎಂದು ಮುನಿರತ್ನ ವಾಗ್ದಾಳಿ ನಡೆಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: