ಪರಿಷತ್​ನಲ್ಲಿ ಹಳ್ಳಿ ಹಕ್ಕಿ ಕುಟುಕಿದ್ದಕ್ಕೆ ಗದ್ಗದಿತರಾದ ಡಿ.ರೂಪಾ ಪತಿ - Mahanayaka

ಪರಿಷತ್​ನಲ್ಲಿ ಹಳ್ಳಿ ಹಕ್ಕಿ ಕುಟುಕಿದ್ದಕ್ಕೆ ಗದ್ಗದಿತರಾದ ಡಿ.ರೂಪಾ ಪತಿ

vishwanath
22/02/2023

ಬೆಂಗಳೂರು: ಐಎಎಸ್ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ.ರೂಪಾ ನಡುವಿನ ಜಗಳ ಇಂದು ಸಹ ಸದನದಲ್ಲಿ ಸದ್ದು ಮಾಡಿದೆ. ನಿನ್ನೆಯೂ ವಿಧಾನ ಪರಿಷತ್​ನಲ್ಲಿ ಅಧಿಕಾರಿಗಳ ಕಿತ್ತಾಟದ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಇಂದು ವಿಧಾನ ಪರಿಷತ್ ಶೂನ್ಯ ವೇಳೆ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಇಬ್ಬರು ಅಧಿಕಾರಿಗಳ ಜಗಳಕ್ಕೆ ಬೇಸರ ಹೊರ ಹಾಕಿದರು. ತಮ್ಮ ಮೊನಚು ಮಾತುಗಳಿಂದಲೇ ಅಧಿಕಾರಿಗಳಿಗೆ ವಿಶ್ವನಾಥ್ ಚಾಟಿ ಬೀಸುತ್ತಿದ್ರೆ, ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದ ಡಿ.ರೂಪಾ ಪತಿ ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್ ಗದ್ಗದಿತರಾಗಿರೋದು ಕಂಡು ಬಂತು.

ಶೂನ್ಯ ವೇಳೆಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್. ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರ ಆರೋಪ ಪ್ರತ್ಯಾರೋಪಗಳು ಧಾರಾವಾಹಿ ರೂಪದಲ್ಲಿ ಪ್ರಸಾರ ಆಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇದು ಪ್ರಾರಂಭವಾಗಿ ಮಾಧ್ಯಮಗಳಲ್ಲಿ ಮುಂದುವರೆದಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ