ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಬಸ್ - Mahanayaka
4:18 PM Thursday 12 - December 2024

ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಬಸ್

bus
01/04/2022

ನಾಗ್ಪುರ: ಚಲ್ಲಿಸುತಿರುವ ಬಸ್ಸಿಗೆ ಬೆಂಕಿ ಹೊತ್ತಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ತಿತ್ತೂರಿನಿಂದ ಸೀತಾಬುಲ್ಡಿಗೆ ತೆರಳುತ್ತಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ನಲ್ಲಿ 45 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಸಂಪೂರ್ಣವಾಗಿ ಆವರಿಸುವ ಮುನ್ನವೇ ಪ್ರಯಾಣಿಕರು ಬಸ್ಸಿನಿಂದ ಇಳಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಗ್ಪುರ ವೈದ್ಯಕೀಯ ಕಾಲೇಜು ಚೌಕದ ಬಳಿ ಬೆಳಗ್ಗೆ 9:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್ ನಿಂದ ಬಸ್ಸಿಗೆ ಬೆಂಕಿ ವ್ಯಾಪಿಸಿತ್ತು. ಬಸ್ಸಿನಲ್ಲಿ ಅಗ್ನಿಶಾಮಕ ಉಪಕರಣ ಇದ್ದರೂ, ಗಾಬರಿಯಿಂದ ಅದನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ಬಸ್ ಚಾಲಕ ಹೇಳಿದ್ದಾರೆ. ಘಟನಾ ಸ್ಧಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಣಕ್ಕೆ ತಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆಯ ಕೊಲೆ ಪ್ರಕರಣ: ಪುತ್ರ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ

ವಿಶ್ವ ಮೂರ್ಖರ ದಿನ ದಿನದ ಇತಿಹಾಸ [April Fools’ Day] ಏನು ಗೊತ್ತಾ?

ಮುಸ್ಲಿಂ ಮಗುವಿಗೆ ಸಿದ್ಧಗಂಗ ಶ್ರೀಗಳ ನೆನಪಿಗೆ ‘ಶಿವಮಣಿ’ ಎಂದು ನಾಮಕರಣ

ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ 18.80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ

ಏನಿದು ಹಲಾಲ್ ಮಾಂಸ?  ಅದು ಅಷ್ಟೊಂದು ಅಪಾಯಕಾರಿಯೇ?

 

ಇತ್ತೀಚಿನ ಸುದ್ದಿ