ದಾಖಲೆ ಬರೆದ ದೇವನೂರು ಮಹಾದೇವ: ಆರೆಸ್ಸೆಸ್ ಆಳ ಮತ್ತು ಅಗಲ ಭರ್ಜರಿ ಮಾರಾಟ - Mahanayaka

ದಾಖಲೆ ಬರೆದ ದೇವನೂರು ಮಹಾದೇವ: ಆರೆಸ್ಸೆಸ್ ಆಳ ಮತ್ತು ಅಗಲ ಭರ್ಜರಿ ಮಾರಾಟ

devanuru mahadeva
09/07/2022

ಮೈಸೂರು:  ದೇವನೂರು ಮಹಾದೇವ ಅವರ  ಆರೆಸ್ಸೆಸ್ ಆಳ ಮತ್ತು ಅಗಲ ಎಂಬ ಕೃತಿಯು ದಾಖಲೆ ಬರೆದಿದ್ದು, ಸದ್ಯದ ಮಾಹಿತಿಗಳ ಪ್ರಕಾರ 10 ಸಾವಿರಕ್ಕೂ ಅಧಿಕ ಪುಸ್ತಕಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ.

ರಾಜ್ಯಾದ್ಯಂತ ಪುಸ್ತಕಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು,  ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಪುಸ್ತಕ ಭಾರೀ ಚರ್ಚೆಗಳಿಗೆ ಕಾರಣವಾಗಿದೆ. ಪುಸ್ತಕ ಓದಿದವರು ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕದ ಕುರಿತಾಗಿ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದ್ದ ದೇವನೂರು ಮಹಾದೇವ ತಮ್ಮ ಪಠ್ಯ ಕೈ ಬಿಡುವಂತೆ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದರು. ಅಲ್ಲದೇ ಪಠ್ಯ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ  ನಾವು ನಮ್ಮ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ, ಜನರಿಗೆ ತಿಳಿಸುತ್ತೇವೆ ಎಂದಿದ್ದರು. ಇದೀಗ ದೇವನೂರರ ಪುಸ್ತಕದ ಪಿಡಿಎಫ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸಂಖ್ಯೆಯ ಜನರು ಪುಸ್ತಕವನ್ನು ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುಸ್ತಕ ಖರೀದಿ ಮಾಡಲು ಕ್ಲಿಕ್ ಮಾಡಿ:

https://store.naanugauri.com/product/

https://www.bookbrahma.com/book/rss-ala-agala

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ