ದೇಶದಲ್ಲಿ ಮತ್ತೆ ದಾಖಲೆಯ ಮಟ್ಟಕ್ಕೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ - Mahanayaka
5:42 AM Friday 20 - September 2024

ದೇಶದಲ್ಲಿ ಮತ್ತೆ ದಾಖಲೆಯ ಮಟ್ಟಕ್ಕೆ ಏರಿದ ಪೆಟ್ರೋಲ್, ಡೀಸೆಲ್ ಬೆಲೆ

10/02/2021

ನವದೆಹಲಿ: ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ 70 ಪೈಸೆ ಮತ್ತು ಡೀಸೆಲ್ ದರಗಳಲ್ಲಿ ಬುಧವಾರ 27 ಪೈಸೆಯಷ್ಟು ಏರಿಕೆಯಾಗಿ ದರಗಳು ದಾಖಲೆ ಮಟ್ಟಕ್ಕೇರಿವೆ.

 

ಪೆಟ್ರೋಲ್ ದರ ಪ್ರತಿ ಲೀಟರ್ಗೆ 26-30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 24-29 ಪೈಸೆ ಹೆಚ್ಚಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 30 ಪೈಸೆ ಏರಿಕೆಯಾಗಿ 87.60 ರೂ ಗೆ ಏರಿಕೆಯಾಗಿದೆ.ಇದು ವರೆಗಿನ ದಾಖಲೆ ಗರಿಷ್ಠ ಮಟ್ಟವಾಗಿದೆ. ಡೀಸೆಲ್ ದರ ಕೂಡ 29 ಪೈಸೆ ಹೆಚ್ಚಾಗಿದ್ದು 77.73ರೂ ಗೆ ಏರಿಕೆಯಾಗಿದೆ.


Provided by

 

ಮುಂಬೈಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 94.12 ರೂಗಳಿಗೆ ಮಾರಾಟವಾಗುತ್ತಿದ್ದು, ಡೀಸೆಲ್ ದರ 84.63ರೂ ಗೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 88.92 ರೂ.ಗಳಿಗೆ ಏರಿಕೆಯಾಗಿದೆ. ಡೀಸೆಲ್ ದರ 81.31ರೂ ಗೆ ಏರಿಕೆಯಾಗಿದೆ. ಚೆನ್ನೈ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 89.96ರೂ ಗೆ ಮತ್ತು ಡೀಸೆಲ್ ದರ 82.90 ರೂಗೆ ಏರಿಕೆಯಾಗಿದೆ.

 

ಬೆಂಗಳೂರಿನಲ್ಲೂ ಪೆಟ್ರೋಲ್ ದರ 32 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90.51ರೂ ಹಾಗೂ ಡೀಸೆಲ್ ಬೆಲೆ 27ಪೈಸೆ ಏರಿಕೆಯಾಗಿ 82.38ರೂ ಗೆ ಏರಿಕೆಯಾಗಿದೆ.

 

ಇತ್ತೀಚಿನ ಸುದ್ದಿ