"ಬೆಳಗ್ಗೆ 6ರಿಂದ 9 ಗಂಟೆಯೊಳಗೆ ಅಗತ್ಯ ವಸ್ತು ಖರೀದಿಸಿ" | ದ.ಕನ್ನಡದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ - Mahanayaka

“ಬೆಳಗ್ಗೆ 6ರಿಂದ 9 ಗಂಟೆಯೊಳಗೆ ಅಗತ್ಯ ವಸ್ತು ಖರೀದಿಸಿ” | ದ.ಕನ್ನಡದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ

dakshina kannada
06/05/2021

ದಕ್ಷಿಣಕನ್ನಡ:  ಕೊರೊನಾ  ನಿಯಂತ್ರಣಕ್ಕೆ ನಾಳೆಯಿಂದ ಟಫ್ ರೂಲ್ಸ್ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು,  ಹೀಗಾಗಿ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ನಡೆದ ತುರ್ತು ಕೊವಿಡ್ ನಿರ್ವಹಣಾ ಸಭೆಯಲ್ಲಿ, ಜನತಾ ಕರ್ಫ್ಯೂ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಚಿವರು ಆದೇಶ ನೀಡಿದರು.

ಬೆಳಗ್ಗೆ 6ರಿಂದ 9ರೊಳಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. 10 ಗಂಟೆಗಳೊಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು. ವಾಹನಗಳಲ್ಲಿ ಅನಗತ್ಯವಾಗಿ ಓಡಾಡಿದರೆ, ವಾಹನ ಸೀಝ್ ಮಾಡಲಾಗುವುದು. ಅನಗತ್ಯ ಓಡಾಟ ನಡೆಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇನ್ನೂ ಸಾರ್ವಜನಿಕರು ಹತ್ತಿರದ ಔಷಧಾಲಯಗಳಿಂದ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿದೆ.  ಮೇ 15ರ ಮೇಲೆ ಅನುಮತಿ ನೀಡಲಾಗಿರುವ  ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ