ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಲೀಗ್: ಯೇನಪೋಯ, ಯುನೈಟೆಡ್ ತಂಡಕ್ಕೆ ಜಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಒಂದು ತಿಂಗಳ ಕಾಲ ನಗರದ ನೆಹರೂ ಮೈದಾನದಲ್ಲಿ ನಡೆದ ಫುಟ್ಬಾಲ್ ಲೀಗ್ ಟೂರ್ನಮೆಂಟ್ ನಲ್ಲಿ ಯೆನಪೋಯ ಕಾಲೇಜು ತಂಡ ಮತ್ತು ಮಂಗಳೂರು ಯುನೈಟೆಡ್ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಅನುಭವಿ ಆಟಗಾರರನ್ನೊಳಗೊಂಡ ಹಿರಿಯರ ತಂಡಗಳನ್ನು ‘ಎ’ ಮತ್ತು ಹೊಸತಾಗಿ ರಿಜಿಸ್ಟರ್ ಆಗಿರುವ ಕಿರಿಯರ ತಂಡಗಳನ್ನು ‘ಬಿ’ ಎಂದು ಪ್ರತ್ಯೇಕವಾಗಿ ಗುಂಪುಗಳನ್ನಾಗಿ ಮಾಡಲಾಗಿತ್ತು. ಎರಡೂ ಗುಂಪುಗಳಲ್ಲಿ ತಲಾ 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟವು ಸಂಜೆ ನಾಲ್ಕರಿಂದ 7 ಗಂಟೆಗಳ ವರೆಗೆ ಒಂದು ತಿಂಗಳ ಕಾಲ ನಡೆದಿತ್ತು.
ಎ ಡಿವಿಶನ್ ವಿಭಾಗದಲ್ಲಿ ಯೆನಪೋಯ ಕಾಲೇಜಿನ ತಂಡ ಪ್ರಥಮ ಹಾಗೂ ಬೆಂಗ್ರೆ ಬ್ರದರ್ಸ್ ದ್ವಿತೀಯ ಸ್ಥಾನ ಪಡೆದಿದೆ. ಬಿ ವಿಭಾಗದಲ್ಲಿ ಮಂಗಳೂರು ಯುನೈಟೆಡ್ ಪ್ರಥಮ ಮತ್ತು ಯುನೈಟೆಡ್ ಪಜೀರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ಈ ಟೂರ್ನಮೆಂಟ್ ನಡೆಯುತ್ತಿದ್ದು, ಇದರಲ್ಲಿ ವಿಜೇತ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತದೆ. ಅಲ್ಲದೇ ವಿಜೇತ ತಂಡದಿಂದ ತಲಾ ಇಬ್ಬರು ಆಟಗಾರರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಯುನೈಟೆಡ್ ಫುಟ್ಬಾಲ್ ತಂಡದ ಮಾಲಿಕ ತೌಸೀಫ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw