ದಕ್ಷಿಣ ಕನ್ನಡದಲ್ಲಿ ಇಂದಿನಿಂದ 2 ದಿನ ವಾರಾಂತ್ಯ ಕರ್ಫ್ಯೂ | ಏನಿದೆ, ಏನಿಲ್ಲ? - Mahanayaka
1:54 PM Saturday 21 - September 2024

ದಕ್ಷಿಣ ಕನ್ನಡದಲ್ಲಿ ಇಂದಿನಿಂದ 2 ದಿನ ವಾರಾಂತ್ಯ ಕರ್ಫ್ಯೂ | ಏನಿದೆ, ಏನಿಲ್ಲ?

weekend curfew
03/07/2021

ದಕ್ಷಿಣಕನ್ನಡ: ಜಿಲ್ಲೆಯಿಂದ ಶನಿವಾರ ದಿಂದ ಎರಡು ದಿನ ವಾರಂತ್ಯದ ಕರ್ಫ್ಯೂ ಜಾರಿಯಾಗಲಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮೀನು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

 ಮಧ್ಯಾಹ್ನದ ನಂತರ ಲಾಕ್‌ ಡೌನ್ ಮುಂದುವರಿಯುತ್ತದೆ. ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಉಳಿದ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಲಾಕ್‌ ಡೌನ್‌ ಸಡಿಲಿಕೆ ಮಾಡಿ, ಶುಕ್ರವಾರ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಅಂಗಡಿ ಮುಂಗಟ್ಟು ಹಾಗೂ ಇತರ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರಿಂದ ಪೇಟೆಯಲ್ಲಿ ಜನಸಂಚಾರ ಜೋರಾಗಿತ್ತು. ಬಹುತೇಕ ಎಲ್ಲ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣಿ ಇತ್ತು.

 ಇನ್ನೂ ಡೆಲ್ಟಾ ಪ್ಲಸ್ ಆತಂಕದ ಕಾರಣ ಕರ್ನಾಟಕ- ಕೇರಳಯ ತಲಪಾಡಿ ಗಡಿಯಲ್ಲಿ ಪೊಲೀಸರು ತಪಾಸಣೆಯನ್ನು ಶುಕ್ರವಾರದಿಂದ ತೀವ್ರಗೊಳಿಸಿದ್ದಾರೆ. ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ.


Provided by

 ಕೇರಳದಿಂದ ಬರುವ ವಾಹನ ತಪಾಸಣೆಯ ಕಾರಣದಿಂದಾಗಿ ಶುಕ್ರವಾರ ತಲಪಾಡಿ ಗಡಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತ್ತು. 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಗಡಿಯಲ್ಲೇ ರಾಂಡಂ ಪರೀಕ್ಷೆ ನಡೆಸಲಾಯಿತು.

ಇತ್ತೀಚಿನ ಸುದ್ದಿ