ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಕೊನೆಗೂ ಗ್ರೀನ್ ಸಿಗ್ನಲ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತಿದ್ದು, ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, 8, 9 ಮತ್ತು 10ನೇ ತರಗತಿ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸೆ.17ರ ಶುಕ್ರವಾರದಿಂದ ಈ ಮೂರು ತರಗತಿಗಳು ಆರಂಭವಾಗಲಿದೆ. 6 ಮತ್ತು 7ನೇ ತರಗತಿಗಳು ಸೆ.20ರ ಸೋಮವಾರದಿಂದ ಆರಂಭವಾಗಲಿದೆ. ಇನ್ನೂ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಕಳುಹಿಸಲು ಒಪ್ಪದ ಪೋಷಕರ ಮಕ್ಕಳಿಗೆ ಆನ್ ಲೈನ್ ನಲ್ಲಿ ತರಗತಿ ನಡೆಸಲು ತೀರ್ಮಾನಿಸಲಾಗಿದೆ. 9 ಮತ್ತು 10ನೇ ತರಗತಿಯವರಿಗೆ ಬೆಳಿಗ್ಗೆ ಹಾಗೂ 8ನೇ ತರಗತಿಯವರಿಗೆ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತವೆ.
ಈ ಸಂಬಂಧ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕರೆದು ಸಭೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಡಿಗ್ರಿ ತರಗತಿಗಳನ್ನು ವಿಜ್ಞಾನ ವಿಭಾಗ ಮಾತ್ರ ಭೌತಿಕ ತರಗತಿ ನಡೆಸಲು ಹೇಳಿದ್ದೇವೆ. ಆದರೆ, ಅಂತಿಮ ಪದವಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಮನವಿ ಕೇಳಿ ಬಂದಿದೆ. ಹೀಗಾಗಿ ವಿವಿ ಆಡಳಿತದೊಂದಿಗೆ ಮಾತುಕತೆ ನಡೆಸಿ ಅಂತಿಮ ಪದವಿ ಆರಂಭಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
ಶಾಕಿಂಗ್ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ಯುವತಿಯ ಖಾಸಗಿ ಅಂಗ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ!
ನಾಮಪತ್ರ ಸಲ್ಲಿಸಲು ಎಮ್ಮೆ ಏರಿ ಬಂದ ಪಂಚಾಯತ್ ಅಭ್ಯರ್ಥಿ!
ಶಾಲೆಯ ಪ್ರಯೋಗಾಲಯದಲ್ಲಿದ್ದ ಆ್ಯಸಿಡ್ ಬಾಟಲಿ ಒಡೆದು ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ!
ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿ, ಅಂಗಾಂಗ ಮುಟ್ಟಿ ವಿಕೃತವಾಗಿ ಥಳಿಸಿದ ತಂಡ: ವಿಡಿಯೋ ವೈರಲ್
ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ