ಬಾಲಕನ ಜೊತೆ ದಲೈಲಾಮ ಅನುಚಿತ ವರ್ತನೆ: ದಲೈಲಾಮಾ ಕ್ಷಮೆಯ ಬೆನ್ನಲ್ಲೇ ಸಹಾಯಕರು ನೀಡಿದ ಸ್ಪಷ್ಟನೆ ಏನು?
ನವದೆಹಲಿ: ಸಾರ್ವಜನಿಕ ಸಮಾರಂಭವೊಂದರಲ್ಲಿ ಅಪ್ರಾಪ್ತ ಬಾಲಕನ ಜೊತೆಗೆ ಅನುಚಿತ ವರ್ತನೆ ತೋರಿದ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ, ತೀವ್ರ ವಿರೋಧಗಳ ಬೆನ್ನಲ್ಲೇ ಕ್ಷಮೆಯಾಚಿಸಿದ ಘಟನೆ ನಡೆದಿದೆ.
ಮಗುವಿನ ತುಟಿಗೆ ಚುಂಬಿಸಿದ ದಲೈಲಾಮಾ ಬಳಿಕ ಮಗುವಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಟಿಬೆಟಿಯನ್ ಸಂಪ್ರದಾಯದ ಪ್ರಕಾರ, ಒಬ್ಬರ ನಾಲಿಗೆಯನ್ನು ಚಾಚುವುದು ಗೌರವ ಅಥವಾ ಒಪ್ಪಂದದ ಸಂಕೇತವಾಗಿದೆ ಮತ್ತು ಇದನ್ನು ಸಾಂಪ್ರದಾಯಿಕ ಟಿಬೆಟಿಯನ್ ಸಂಸ್ಕೃತಿಯಲ್ಲಿ ಶುಭಾಶಯವಾಗಿ ಬಳಸಲಾಗುತ್ತದೆ ಎಂದು ದಲೈಲಾಮಾ ಸಹಾಯಕರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಟಿಬೆಟಿಯನ್ ಜಾನಪದದ ಪ್ರಕಾರ, ಒಂಬತ್ತನೇ ಶತಮಾನದ ಕ್ರೂರ ಟಿಬೆಟಿಯನ್ ರಾಜನ ಸಹಾಯಕರು ಕಪ್ಪು ನಾಲಿಗೆಯನ್ನು ಹೊಂದಿದ್ದರು, ಆದ್ದರಿಂದ ಜನರು ಅವನಂತೆ ಅಲ್ಲ ಎಂದು ತೋರಿಸಲು ತಮ್ಮ ನಾಲಿಗೆಯನ್ನು ಚಾಚುತ್ತಾರೆ ಎಂದು ಸಹಾಯಕರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw