10:47 AM Wednesday 12 - March 2025

ದಳಪತಿ ವಿಜಯ್ ಜೊತೆಗೆ ನಟಿಸಲಿದ್ದಾರಾ ರಶ್ಮಿಕಾ ಮಂದಣ್ಣ?

vijay rashmika
09/03/2022

ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ ಚಿತ್ರಗಳೆಲ್ಲವೂ ಹಿಟ್ ಆಗುತ್ತಿದ್ದು, ಅವರ ಅದ್ಬುತ ನಟನೆಗೆ ಬಹುಭಾಷಾ ನಿರ್ದೇಶಕರು ಕೂಡ ಮನಸೋತಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರು, ಬಾಲಿವುಡ್ ನಲ್ಲಿಯೂ ನಟಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ಸುದ್ದಿ ಕೇಳಿ ಬಂದಿದ್ದು, ತಮಿಳು ಚಿತ್ರರಂಗಕ್ಕೂ ರಶ್ಮಿಕಾ ಪಾದರ್ಪಣೆ ಮಾಡಲಿದ್ದು, ಜನಪ್ರಿಯ ನಟನ ಚಿತ್ರದಲ್ಲಿ ನಟನೆ ಮಾಡಲಿದ್ದಾರಂತೆ!

ಹೌದು…! ದಳಪತಿ ವಿಜಯ್ ಅವರ 66ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಧಿಕೃತ ಸುದ್ದಿ ಕೂಡ ಸದ್ಯದಲ್ಲೇ ಹೊರ ಬೀಳಲಿದೆ ಎನ್ನುವ ಮಾತುಗಳು  ಕೇಳಿ ಬಂದಿವೆ.

ಸದ್ಯ ನಟ ವಿಜಯ್ ಅವರು ಬೀಸ್ಟ್ ಚಿತ್ರದ ಕೊನೆಯ ಹಂತದ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.  ಇದೇ ಸಂದರ್ಭದಲ್ಲಿ ವಿಜಯ್ ಅವರ 66ನೇ ಚಿತ್ರದ ಬಗ್ಗೆ ಬಿಸಿ ಬಿಸಿ ಮಾತುಗಳು ಕೇಳಿ ಬರುತ್ತಿದ್ದು, ನಟಿ ರಶ್ಮಿಕಾ ಮಂದಣ್ಣ ಅವರು ತಮಿಳು ನೆಲದಲ್ಲಿಯೂ ತಮ್ಮ ಅದ್ಭುತ ಅಭಿನಯದ ಮೂಲಕ ಸದ್ದು ಮಾಡಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ | ಕೇಂದ್ರ ಇಂಧನ ಸಚಿವರು ಜನರಿಗೆ ನೀಡಿದ ಸ್ಪಷ್ಟನೆ ಏನು?

ಮಹಿಳಾ ದಿನಾಚರಣೆಯಂದೇ ಹೀನ ಕೃತ್ಯ: ವಿದೇಶಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ

ಡ್ರ್ಯಾಗನ್ ಫ್ರೂಟ್ ಸೇವನೆಯಿಂದಾಗುವ ಲಾಭಗಳೇನು?

4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಜೇಮ್ಸ್!

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಸಚಿವ ಆನಂದ್ ಸಿಂಗ್, ಜನಾರ್ದನ ರೆಡ್ಡಿಗೆ ಜಾಮೀನು

ಇತ್ತೀಚಿನ ಸುದ್ದಿ

Exit mobile version