ದಲಿತ ವರನಿಗೆ ಥಳಿಸಿ, ಕುದುರೆಯಿಂದ ಇಳಿಸಿ ಅವಮಾನ!
ಲಕ್ನೋ: ಮದುವೆ ಮೆರವಣಿಗೆಯಲ್ಲಿ ಕುದುರೆ ಮೆರವಣಿಗೆ ವೇಳೆ ದಲಿತ ವರನನ್ನು ಕುದುರೆಯಿಂದ ಇಳಿಸಿದ ಗುಂಪೊಂದು ಥಳಿಸಿ, ಅವಮಾನಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಅಜಯ್ ಜಾಟವ್(24) ಹಲ್ಲೆ ಅಪಮಾನಕ್ಕೀಡಾದ ದಲಿತ ವರನಾಗಿದ್ದು, ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹಲ್ಲಾ ಜಾತವ್ ಬಸ್ತಿ ಪ್ರದೇಶದಲ್ಲಿ, ರಾಧಾ ಕೃಷ್ಣ ಮ್ಯಾರೇಜ್ ಹಾಲ್‌ನಲ್ಲಿ ದಲಿತ ಕುಟುಂಬವೊಂದರ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿಗಳು ಕೋಲುಗಳನ್ನು ಹಿಡಿದುಕೊಂಡು ಮದುವೆ ಮಂಟಪಕ್ಕೆ ನುಗ್ಗಿದ್ದು, ವರ ಅಜಯ್ ಗೆ ಥಳಿಸಿ, ಕುದುರೆಯಿಂದ ಇಳಿಸಿದ್ದಲ್ಲದೇ ಮೆರವಣಿಗೆ ಮಾಡದಂತೆ ಬೆದರಿಕೆ ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರನ ಅತ್ತೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ದೂರು ನೀಡಲು ಹೋದ ವೇಳೆ ಸಂತ್ರಸ್ತರ ಜೊತೆಗೆ ಸರಿಯಾಗಿ ಸಹಕರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿಕ ಘಟನೆಯನ್ನು ಆಗ್ರಾ ಕಮಿಷನರ್ ಗಮನಕ್ಕೆ ತಂದಿದ್ದು, ಇದಾದ ನಂತರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
5ಜಿ ಯುಗದಲ್ಲಿರುವ ಭಾರತದಲ್ಲಿ ಇನ್ನು ಕೂಡ ಜಾತಿ ಎಂಬ ಅನಾಗರಿಕ ಪದ್ಧತಿ ಅಘೋಷಿತವಾಗಿ ಜಾರಿಯಲ್ಲೇ ಇದೆ. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪೊಲೀಸರೇ ಈ ಪ್ರಕರಣ ತನಿಖೆ ನಡೆಸುತ್ತಿರುವುದರಿಂದಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದೇ ಎಂದು ಕಾದು ನೋಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw