‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಟೀಕಿಸಿದಕ್ಕಾಗಿ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ
ರಾಜಸ್ಥಾನ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಟೀಕಿಸಿದಕ್ಕಾಗಿ ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ದೇವಸ್ಥಾನದ ಪ್ರಾಂಗಣದಲ್ಲಿ ಮೂಗಿನಿಂದ ಬರೆದು ಕ್ಷಮೆ ಕೇಳಿಸಿದ ವಿಲಕ್ಷಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಅಲ್ವಾರ್ ನಲ್ಲಿ ಈ ಘಟನೆ ನಡೆದಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ಸಂಬಂಧಿಸಿದಂತೆ ರಾಜೇಶ್ ಎಂಬ ದಲಿತ ಯುವಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಈ ಟೀಕೆಯನ್ನು ಕೆಲವರು ಗಂಭೀರವಾಗಿ ಪರಿಗಣಿಸಿ, ರಾಜೇಶ್ ವಿರುದ್ಧ ತಿರುಗಿ ಬಿದ್ದಿದ್ದರು ಎನ್ನಲಾಗಿದೆ.
ತನ್ನ ಪೋಸ್ಟ್ ಗೆ ತೀವ್ರವಾಗಿ ಚರ್ಚೆಗೀಡಾಗುತ್ತಿದ್ದಂತೆಯೇ ರಾಜೇಶ್ ತನ್ನ ವಾಲ್ ನಿಂದ ಪೋಸ್ಟ್ ನ್ನು ಡಿಲೀಟ್ ಮಾಡಿದ್ದ. ಆದರೆ, ಕೆಲವರು, “ಹಿಂದೂ ದೇವತೆಗಳ ಬಗ್ಗೆ ಅವಹೇಳನಾ ಮಾಡಲಾಗಿದೆ” ಎಂದು ಆರೋಪಿಸಿ, ರಾಜೇಶ್ ನನ್ನು ಥಳಿಸಿದ್ದು, ಬಳಿಕ ದೇವಸ್ಥಾನಕ್ಕೆ ಎಳೆದೊಯ್ದು, ಮೂಗಿನಿಂದ ನೆಲದ ಮೇಲೆ ಕ್ಷಮೆಬರೆಸಿ ಕ್ಷಮೆ ಯಾಚಿಸಿರುವ ಅಮಾನವೀಯ ಘಟನೆ ನಡೆದಿದೆ.
ವಿಡಿಯೋ ವೈರಲ್ ಆದ ನಂತರ ಬೆಹ್ರೋರ್ ಪೊಲೀಸರು 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ ಇದನ್ನು ಪ್ರಚಾರ ಮಾಡಲು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಡಾ.ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್ ಗೆ ಹಾನಿ: ಇಬ್ಬರು ಕಿಡಿಗೇಡಿಗಳ ಬಂಧನ
ಒಂದು ಕಣ್ಣಿನ ಮಗುವಿನ ಜನನ: ವಿಶ್ವದಲ್ಲೇ ಅಪರೂಪದ ಘಟನೆ
ದೆಹಲಿ ಗಲಭೆ: ನ್ಯಾಯಾಲಯದಿಂದ ಉಮರ್ ಖಾಲಿದ್ ಗೆ ಜಾಮೀನು ನಿರಾಕರಣೆ