ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಮಹಿಳಾ ಹೋರಾಟಗಾರ್ತಿ ಕೃಷ್ಣಿ ಬೆಳ್ಳಾಲ ನಿಧನ - Mahanayaka
9:29 PM Wednesday 5 - February 2025

ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಮಹಿಳಾ ಹೋರಾಟಗಾರ್ತಿ ಕೃಷ್ಣಿ ಬೆಳ್ಳಾಲ ನಿಧನ

krishni bellala
04/12/2023

ಕುಂದಾಪುರ: ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಮಹಿಳಾ ಹೋರಾಟಗಾರ್ತಿ ಕೃಷ್ಣಿ ಬೆಳ್ಳಾಲ ಎಂಬ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಮಹಿಳಾ ಹೋರಾಟಗಾರ್ತಿ ಭಾನುವಾರ ಬೆಳಗ್ಗೆ ಸ್ವಗೃಹದಲ್ಲೆ ನಿಧಾನ ಹೊಂದಿದ್ದಾರೆ

ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲದಲ್ಲಿ ಕೃಷಿ ಮಾಡಿಕೊಂಡಿರುವ ಇವರು, ಅಂಬೇಡ್ಕರ್ ತತ್ವ ಆದರ್ಶಗಳನ್ನ ಪಾಲಿಸಿಕೊಂಡು ಬಂದಿದ್ದು, ಸಂಘಟನೆಯ ಅನೇಕ ಹೋರಾಟಗಳಲ್ಲಿ   ಭಾಗವಹಿಸಿ ದಿಟ್ಟತನ ಮೆರೆದಿದ್ದಾರೆ.

ಇದೀಗ ಅಸಹಜ ಸಾವಿಗೆ ಶರಣಾಗಿ ಪತಿ ನಾಗ ಬೆಳ್ಳಾಲ, ಮಕ್ಕಳಾದ ರಾಮ ಬೆಳ್ಳಾಲ, ಸತ್ಯ ನಾರಾಯಣ ಬೆಳ್ಳಾಲ, ಚಂದ್ರಿಕಾ ಬೆಳ್ಳಾಲ, ರಾಧಿಕಾ ಬೆಳ್ಳಾಲ, ಹಾಗೂ ಮೊಮ್ಮಕ್ಕಳು, ಹಾಗೂ ಬಂದು ಮಿತ್ರರನ್ನ ಅಗಲಿದ್ದಾರೆ.

ಸಂತಾಪ:

ದಲಿತ ಸಂಘಟನೆ ಭೀಮ ಘರ್ಜನೆಯ ಹಿರಿಯ ಹೋರಾಟ ಗಾರ್ತಿಯನ್ನು ಕಳಕೊಂಡ ಬಗ್ಗೆ ದಲಿತ ಸಂಘಟನೆ ಭೀಮ ಘರ್ಜನೆಯ ರಾಜ್ಯ ಮುಖಂಡ ಉದಯ್ ಕುಮಾರ್ ತಲ್ಲೂರು ಉಡುಪಿ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಹಾಗೂ ಹಿರಿಯ ಪತ್ರಕರ್ತರಾದ ರಾಜೇಶ್ ನೆತ್ತೋಡಿ ಅವರು ಸಂತಾಪ  ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ