ಕಮೀಷನರ್ ಹಠಾವೋ ಸಾಮೂಹಿಕ ಧರಣಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ
ಮಂಗಳೂರು: ಸರ್ವಾಧಿಕಾರಿ ಧೋರಣೆಯ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ರವರನ್ನು ವರ್ಗಾವಣೆಗೊಳಿಸುವಂತೆ ಹಾಗೂ ಪ್ರತಿಭಟನೆ, ಧರಣಿಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ದಿನಾಂಕ 23-12-2024 ರಂದು ನಡೆಯಲಿರುವ “ಸಾಮೂಹಿಕ ಧರಣಿ”ಯನ್ನು ಬೆಂಬಲಿಸಿ ಭಾಗವಹಿಸುವ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಸ್ವಾಭಿಮಾನಿ ಪ್ರೊ. ಬಿ.ಕೃಷ್ಣಪ್ಪ –ದ.ಕ. ಜಿಲ್ಲಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಕೃಷ್ಣಾನಂದ. ಡಿ., ರಾಮದಾಸ್ ಮೇರೆಮಜಲು, ಖಜಾಂಚಿ ನಾಗೇಶ್ ಚಿಲಿಂಬಿ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರಾದ ಕಮಲಾಕ್ಷ ಬಜಾಲ್, ಸಂಕಪ್ಪ ಕಾಂಚನ್, ಮಂಗಳೂರು ತಾಲೂಕು ಸಂಚಾಲಕರಾದ ರವಿ ಪೇಜಾವರ, ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರ್, ಕೃಷ್ಣ ಕೆ. ಎಕ್ಕಾರು, ದೊಂಬಯ್ಯ ಕಟೀಲ್, ಸೀತಾ ಪೇಜಾವರ, ಗಿರಿಜಾ ನಾಗೇಶ್, ಪುಷ್ಪ ಕಟೀಲ್,ಹಿರಿಯ ದಲಿತ ಮುಖಂಡರಾದ ಅಣ್ಣು ಸಾಧನಾ ಬೆಳ್ತಂಗಡಿ, ಚಿಂಕ್ರ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: