ತೋಟದಿಂದ ಪೇರಳೆ ಹಣ್ಣು ಕಿತ್ತು ತಿಂದ ಆರೋಪ ಹೊರಿಸಿ ದಲಿತ ಯುವಕನ ಬರ್ಬರ ಹತ್ಯೆ!
ಉತ್ತರಪ್ರದೇಶ: ತೋಟವೊಂದರಿಂದ ಪೇರಳೆ ಹಣ್ಣು ಕಿತ್ತು ತಿಂದ ಆರೋಪ ಹೊರಿಸಿ 25 ವರ್ಷ ವಯಸ್ಸಿನ ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಅಲಿಗಢ ಮನೇನಾ ಗ್ರಾಮದಲ್ಲಿ ನಡೆದಿದೆ.
ಭೀಮ್ ಸೇನ್, ಬನ್ವಾರಿ ಎಂಬವರು ತನ್ನ ಸಹಚಾರರೊಂದಿಗೆ ಸೇರಿ ಈ ದುಷ್ಕೃತ್ಯವನ್ನು ನಡೆಸಿದ್ದು, ಓಂ ಪ್ರಕಾಶ್ ಎಂಬ 25 ವರ್ಷದ ದಲಿತ ಯುವಕನನ್ನು ಕಗ್ಗೊಲೆ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಓಂ ಪ್ರಕಾಶ್ ನ ಸಹೋದರ ಸತ್ಯಪ್ರಕಾಶ್, ನನ್ನ ಸಹೋದರ ಬಯಲು ಶೌಚಕ್ಕೆ ಹೋಗಿ ಹಿಂದಿರುತ್ತಿದ್ದ ವೇಳೆ ತೋಟವೊಂದರಿಂದ ಪೇರಳೆ ಹಣ್ಣು ಕಿತ್ತು ತಿಂದಿದ್ದಾನೆ. ಈ ವಿಚಾರ ತಿಳಿದ ಭೀಮ್ ಸೇನ್, ಬಲ್ವಾರಿ ಹಾಗೂ ತೋಟದ ಮಾಲಿಕ ಸೇರಿದಂತೆ ಸ್ಥಳೀಯರ ಗುಂಪು ನನ್ನ ಸಹೋದರನಿಗೆ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂಥೆ ಭೀಮ್ ಸೇನ್ ಹಾಗೂ ಬನ್ವಾರಿಲಾಲ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka