ಟೋಕನ್ ಇಲ್ಲದೆ ಪಡಿತರ ವಿತರಣೆ: ಪ್ರಶ್ನಿಸಿದ ದಲಿತ ಯುವಕನನ್ನು ನಿಂದಿಸಿ, ಹಲ್ಲೆಗೆ ಯತ್ನ
ಉಡುಪಿ: ಟೋಕನ್ ಇಲ್ಲದೆ ಪಡಿತರ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿರುವ ಘಟನೆ ಸಹಕಾರಿ ವ್ಯವಸಾಯ ಬ್ಯಾಂಕ್ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಚೇರಿಯಲ್ಲಿ ನಡೆದಿದೆ.
ಅಂಬಾಗಿಲು ನಿವಾಸಿ ಸತೀಶ್ ವಿ. ಎಂಬವರು ನ. 21ರಂದು ಬೆಳಿಗ್ಗೆ ಉಡುಪಿ ತಾಲೂಕಿನ ಸಹಕಾರಿ ವ್ಯವಸಾಯ ಬ್ಯಾಂಕ್ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಛೇರಿಗೆ ಪ್ರತಿ ತಿಂಗಳಂತೆ ತಮ್ಮ ಕಾರ್ಡ್ ನ ಪಡಿತರ ತರಲು ಹೋಗಿದ್ದರು. ಆಗ ಅಂಗಡಿಯಲ್ಲಿ ಈಗ ಸಮಯವಿಲ್ಲ ಸಂಜೆ ಬನ್ನಿ ಎಂದು ಹೇಳಿದ್ದರು.
ಅದರಂತೆ ಸತೀಶ್ ವಿ. ಅವರು ಸಂಜೆ 4:15ಕ್ಕೆ ಅಂಗಡಿಗೆ ಹೋದಾಗ ಗ್ರಾಹಕರೊಬ್ಬರಿಗೆ ಟೋಕನ್ ನೀಡದೇ ಪಡಿತರ ಕೊಡುತ್ತಿದ್ದರು. ಅದನ್ನು ಗಮನಿಸಿದ ಸತೀಶ್ ಅವರು ಯಾಕೆ ನಂತರ ಬಂದಿರುವವರಿಗೆ ಟೋಕನ್ ಇಲ್ಲದೇ ಪಡಿತರ ಕೊಡುತ್ತೀರಿ. ಅವರು ಸಾಲಿನಲ್ಲಿ ನಿಲ್ಲಬೇಕಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಅಂಗಡಿಯಿಂದ ಹೊರಬಂದ ಸಚ್ಚೇಂದ್ರ ನಾಯಕ್ ಎಂಬಾತನು ಸತೀಶ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಎರಡನೇ ಆರೋಪಿ ಅಶ್ವಿನಿ ಶೆಟ್ಟಿ ಕೂಡಾ ಹೊರಗೆ ಬಂದು ಸತೀಶ್ ಅವರ ರೇಶನ್ ಕಾರ್ಡ್ ನ್ನು ಕಸಿದುಕೊಂಡು ಮುಖಕ್ಕೆ ಎಸೆದು ಸಾರ್ವಜನಿಕರವಾಗಿ ಹಿಯಾಳಿಸಿ ಬೈದು ಅವಮಾನ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸತೀಶ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಅಂಡಿಗೆ ತೆರಳಿ ಮಹಜರು ಪ್ರಕ್ರಿಯೆ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka