ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ - Mahanayaka
4:19 PM Wednesday 5 - February 2025

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

luqman bantwal
25/10/2021

ಮಂಗಳೂರು: ಪುತ್ತೂರು ತಾಲೂಕಿನ ಗ್ರಾಮವೊಂದರ ದಲಿಯ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ, ಆರೆಸ್ಸೆಸ್ ಮುಖಂಡ ನಾರಾಯಣ ರೈ ಎಂಬಾತನನ್ನು ರಕ್ಷಿಸಲು ಕಾಣದ ಕೈಗಳ ಒತ್ತಡ ಮೇರೆಗೆ ಪೊಲೀಸರು ಹಾಗೂ ಲೇಡಿಗೋಶನ್ ವೈದ್ಯಾಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು  ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಆರೋಪಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ದೈಹಿಕ ಸಂಪರ್ಕದಿಂದ ತಾನು ಗರ್ಭಾವತಿಯಾಗಿದ್ದು, ನಾರಾಯಣ ರೈ ಎಂಬಾತ ತನ್ನನ್ನು ಗರ್ಭಾವತಿ ಮಾಡಿ, ತಾನು ಮಗುವಿಗೆ ಜನ್ಮ ನೀಡಲು ಕಾರಣನಾಗಿದ್ದಾನೆ ಎಂದು  ಸಂತ್ರಸ್ತ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಂತ್ರಸ್ತ ಬಾಲಕಿ ತನ್ನ ಕುಟುಂಬಕ್ಕೆ ಆಧಾರವಾಗಬೇಕು ಎಂಬ ನಿಟ್ಟಿನಲ್ಲಿ ಭೂಮಾಲಕ ನಾರಾಯಣ ರೈ ಎಂಬವರ ಮನೆಯಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಬೆದರಿಸಿ ಅತ್ಯಾಚಾರಗೈಯ್ಯಲಾಗಿದೆ. ಬಳಿಕ ಅದನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದಲ್ಲದೆ, ಈ ಸಂಬಂಧ 2021ರ ಸೆಪ್ಟಂಬರ್ 5ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿಯ ಹೇಳಿಕೆ ತನ್ನದಲ್ಲ. ಸಹಿ ಕೂಡಾ ತನ್ನದಲ್ಲ ಎಂದು ಬಾಲಕಿ ಹೇಳಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಸಹೋದರ ಸಂಬಂಧಿ ಅಣ್ಣನನ್ನು ಬಂಧಿಸಿದ್ದು ಆತ ನಿರಪರಾಧಿ, ಪೊಲೀಸ್ ಠಾಣೆಯಲ್ಲಿ ಮಾತ್ರವಲ್ಲದೆ, ಮ್ಯಾಜಿಸ್ಟ್ರೇಟ್ ಎದುರಿನಲ್ಲಿಯೂ ತಾನು ಆರೋಪಿ ನಾರಾಯಣ ರೈ ಹೆಸರು ಹೇಳಿರುವುದಾಗಿ ಬಾಲಕಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.

ಬಾಲಕಿಯು ನೈಜ ಆರೋಪಿಯೆಂದು ಹೆಸರಿಸಿರುವ ನಾರಾಯಣ ರೈ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾಮೀನು ಅರ್ಜಿ ಕೂಡ ಹಾಕಿದ್ದು, ಅದು ತಿರಸ್ಕೃತಗೊಂಡಿದೆ. ಹೀಗಿರುವಾಗ ಅತ್ಯಾಚಾರ, ದಲಿತ ದೌರ್ಜನ್ಯ, ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ ಆರೋಪಿಯನ್ನು ಡಿಎನ್‌ ಎ ಪರೀಕ್ಷೆಗೊಪಡಿಸಬೇಕು. ಅ. 28ರೊಳಗೆ ಆರೋಪಿ ನಾರಾಯಣ ರೈ ಬಂಧನವಾಗದಿದ್ದರೆ, ದಲಿತ ಸಮನ್ವಯ ಸಂಘಟನೆಗಳ ನೇತೃತ್ವದ ಹೋರಾಟಕ್ಕೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕೂಡಾ ಬೆಂಬಲ ಸೂಚಿಸಲಿದೆ ಎಂದು ಘೋಷಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ಕ್ರೌರ್ಯ ಮೆರೆದ ತಂದೆ–ತಾಯಿ

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

ತುಂಬಿ ತುಳುಕುತ್ತಿದ್ದ ಬಸ್ ಗೆ ಹತ್ತಿದ ಸಿಎಂನ್ನು ಕಂಡು ಪ್ರಯಾಣಿಕರಿಗೆ ಅಚ್ಚರಿ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ

ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ

ಇತ್ತೀಚಿನ ಸುದ್ದಿ