ದೇವಸ್ಥಾನಕ್ಕೆ ತೆರಳಿದ ದಲಿತ ಕುಟುಂಬಕ್ಕೆ ಅವಮಾನ: ಹೊರ ನಡೆಯಿರಿ ಎಂದು ಧಮ್ಕಿ
ತುಮಕೂರು: ದೇವಸ್ಥಾನಕ್ಕೆ ತೆರಳಿದ ದಲಿತ ಕುಟುಂಬಕ್ಕೆ ಅರ್ಚಕನೋರ್ವ ಅವಮಾನ ಮಾಡಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದ್ದು, ದೇವಸ್ಥಾನಕ್ಕೆ ಪೂಜೆ ಮಾಡಲು ಹೋದ ವೇಳೆ ನಿಮ್ಮನ್ನು ಯಾರು ದೇವಸ್ಥಾನಕ್ಕೆ ಬರಲು ಹೇಳಿದ್ದು, ನಡೆಯಿರಿ ಇಲ್ಲಿಂದ ಎಂದು ಧಮ್ಕಿ ಹಾಕಿರುವ ಘಟನೆ ನಡೆದಿದೆ.
ನಿಟ್ಟೂರು ಗ್ರಾಮದ ಮುಳಕಟ್ಟಮ್ಮ ದೇವಾಲಯದಲ್ಲಿ ಪೂಜೆ ಮಾಡಲು ದಲಿತ ಸಮುದಾಯದವರು ಹೋಗಿದ್ದರು. ಪೂಜೆ ಮಾಡಲು ತಂದ ಸಾಮಗ್ರಿಗಳನ್ನೂ ಮುಟ್ಟದ ಅರ್ಚಕನ ದುರಾಹಂಕಾರ ಕಂಡು ದಲಿತ ಕುಟುಂಬಸ್ಥರು ಶಾಕ್ ಆಗಿದ್ದಾರೆ.
ನಿಮಗೆ ಇಲ್ಲಿ ಪೂಜೆ ಮಾಡಲ್ಲ, ಹೊರಹೋಗಿ ಇಲ್ಲವಾದರೆ ಬಾಗಿಲು ಹಾಕೋದಾಗಿ ಎಂದು ಅನಿತ್ ರಾಜು ಎಂಬವರ ಕುಟುಂಬಕ್ಕೆ ಧಮ್ಕಿ ಹಾಕುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ರಾಜ್ಯದಲ್ಲಿ ಒಂದರ ಹಿಂದೊಂದರಂತೆ ಅಸ್ಪೃಷ್ಯತಾ ಆಚರಣೆಯ ಘಟನೆಗಳು ನಡೆಯುತ್ತಿರುವುದು ದಲಿತರ ತಾಳ್ಮೆ ಕೆಡಿಸುತ್ತಿದೆ. ಒಂದೆಡೆ ಹಿಂದೂ ಧರ್ಮದ ಪ್ರತಿಪಾದಕರಂತೆ ಮಾತನಾಡುತ್ತಿರುವ ದೊಡ್ಡ ದೊಡ್ಡ ನಾಯಕರು ಅಸ್ಪೃಷ್ಯತೆ ಬಗ್ಗೆ ಮಾತನಾಡದೇ ಮೌನ ಸಮ್ಮತಿ ಸೂಚಿಸುತ್ತಿದ್ದು, ಇನ್ನೊಂದೆಡೆ ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವ ಹೈಡ್ರಾಮಾ ನಡೆಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಸ್ಪೃಷ್ಯತೆ ವಿರುದ್ಧ ಈಗಾಗಲೇ ದಲಿತ ಸಮುದಾಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಸ್ಪೃಷ್ಯತೆ ವಿರುದ್ಧ ಪ್ರಬಲ ಹೋರಾಟ ರೂಪುಗೊಳ್ಳುವ ಸಾಧ್ಯತೆಗಳು ರಾಜ್ಯದಲ್ಲಿ ಕಂಡು ಬರುತ್ತಿದೆ. ಜನರು ರೊಚ್ಚಿಗೇಳುವ ಮುನ್ನ ಜಾತಿ ಪೀಡೆಗಳನ್ನು ನಿಗ್ರಹಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಅನ್ನೋ ಕಿಡಿ ನುಡಿಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka