ಸಚಿವ ಮುರುಗೇಶ್ ನಿರಾಣಿ ಗುತ್ತಿಗೆಯ ಕಾರ್ಖಾನೆಯಲ್ಲಿ ದಲಿತ ಮಹಿಳೆಯ ಮೇಲೆ ದೌರ್ಜನ್ಯ - Mahanayaka

ಸಚಿವ ಮುರುಗೇಶ್ ನಿರಾಣಿ ಗುತ್ತಿಗೆಯ ಕಾರ್ಖಾನೆಯಲ್ಲಿ ದಲಿತ ಮಹಿಳೆಯ ಮೇಲೆ ದೌರ್ಜನ್ಯ

manjula
29/05/2021

ಮಂಡ್ಯ: ರಾಜ್ಯದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಪಾಂಡವಪುರದ ಪಿಎಸ್ ಎಸ್ ಕೆ ಕಾರ್ಖಾನೆಯ ಅಧಿಕಾರಿಗಳು ದಲಿತ ಮಹಿಳೆಯನ್ನು ಮ್ಯಾನ್ ಹೋಲ್ ಗೆ ಇಳಿಸಿದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್ ಎಸ್ ಕೆ ಕಾರ್ಖಾನೆಯ ಕ್ವಾಟರ್ಸ್ ನಲ್ಲಿನ ಒಣ ಮಲ ಗುಂಡಿಗೆ  ಇಳಿದು ಸ್ವಚ್ಛ ಮಾಡು ಎಂದು ಕಾರ್ಖಾನೆಯ ಸಿವಿಲ್ ಎಂಜಿನಿಯರ್ ನಾಗೇಶ್ ಎಂಬಾತ ದಲಿತ ಮಹಿಳೆ ಮಂಜುಳಾ ಎಂಬವರಿಗೆ ಒತ್ತಡ ಹಾಕಿದ್ದು, ಉದ್ಯೋಗದ ಅನಿವಾರ್ಯತೆಯಿಂದಾಗಿ ಆತನ ಒತ್ತಡಕ್ಕೆ ಮಣಿದು ಮಹಿಳೆ ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಚಗೊಳಿಸಿದ್ದಾರೆ.

ಅಧಿಕಾರಿಗಳು ನನ್ನ ಬಲವಂತವಾಗಿ ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛ ಮಾಡಿಸಿದ್ದಾರೆ ಎಂದು ಮಂಜುಳಾ ಅವರು ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ,  ಎಸಿ ಬಳಿಯಲ್ಲಿ ಈ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದೆ.

ಇತ್ತೀಚಿನ ಸುದ್ದಿ