ಬಡ ಕುಟುಂಬದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿಕೊಟ್ಟ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ

ಬಂಟ್ವಾಳ: ತಾಲೂಕಿನ ಸಜೀಪಪಡು ಗ್ರಾಮದ ಮಿತ್ತಮಜಲು ಎಂಬಲ್ಲಿಯ ಬಡ ಆದಿ ದ್ರಾವಿಡ ಕುಟುಂಬದ ಬಾಬು ಎಂಬವರು ಅನಾರೋಗ್ಯದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತರು ಕಡು ಬಡವರಾಗಿದ್ದು, ಇವರ ಮೃತದೇಹವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, PDO ಮಾಯಾ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಶೈಲೇಶ್ ಪೂಜಾರಿ, ಪೌಜಿಯ ಆಶಾ ಕಾರ್ಯಕರ್ತೆ, ರಮೇಶ್ M. ಅಧ್ಯಕ್ಷರು ಕಾಂಗ್ರೆಸ್ ಹಿಂದುಳಿದ ವರ್ಗ ಪಾಣೆಮಂಗಳೂರು ಹಾಗೂ ಯಶವಂತ್ ದೇರಾಜೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಬಂಟ್ವಾಳ ಇವರುಗಳ ಮುತುವರ್ಜಿಯಿಂದ ತರಲಾಗಿತ್ತು.
ಬಳಿಕ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸಂಘಟನೆಯ ಸ್ಥಾಪನಾಧ್ಯಕ್ಷರು ಬಿ. ಕೆ. ಸೇಸಪ್ಪ ಬೆದ್ರಕಾಡು ಮತ್ತು ಪದಾಧಿಕಾರಿಗಳಾದ ಚಂದ್ರಶೇಖರ್ ಯು. ವಿಟ್ಲ ಜಿಲ್ಲಾಧ್ಯಕ್ಷರು, ಉಳ್ಳಾಲ ತಾಲೂಕು ಅಧ್ಯಕ್ಷರಾದ ನಾಗೇಶ್ ಟಿ ಕೈರಂಗಳ, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಮಂಜನಾಡಿ, ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷರಾದ ಗಣೇಶ್ ಸೀಗೆಬಲ್ಲೆ ಇವರುಗಳ ಸಹಕಾರದೊಂದಿಗೆ ಮೃತರ ಅಕ್ಕಂದಿರ ಉಪಸ್ಥಿತಿಯಲ್ಲಿ ಕಂಚಿನಡ್ಕ ಪದವಿನ ರುದ್ರ ಭೂಮಿಯಲ್ಲಿ ದಫನ ಮಾಡಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka