ಬೆಳ್ತಂಗಡಿ: ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿ ಮನೆ ಸಹಿತ ಹಲವರ ಮನೆಯ ಕುಡಿಯುವ ನೀರಿನ ಸಂಪರ್ಕ ಕಡಿತ
ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿಯ ಮನೆಯೂ ಸೇರಿದಂತೆ ಹಲವು ಬಡ ಕುಟುಂಬಗಳ ಕುಡಿಯುವ ನೀರಿನ ನಳ್ಳಿ ನೀರುಸಂಪರ್ಕವನ್ನು ಗ್ರಾಮಪಂಚಾಯತ್ ನಲ್ಲಿ ಯಾವುದೇ ನಿರ್ಣಯ ಮಾಡದೆ ಹಾಗೂ ಮುನ್ಸೂಚನೆ ಅಥವಾ ನಿಗದಿತ ಗಡುವು ನೀಡದೆ, ಪಂಪು ಚಾಲಕ ದಿಢೀರ್ ಕಡಿತಗೊಳಿಸಿದ ಘಟನೆ ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಪ.ಜಾ. ಕಾಲೋನಿಯಲ್ಲಿ ನಡೆದಿದೆ.
ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ನೀರಕಜೆ ಪರಿಸರದಲ್ಲಿ ಅಧ್ಯಕ್ಷರ ವಾರ್ಡಿನಲ್ಲಿ ಪ.ಜಾ., ಪ.ಪಂ. ಕಾಲೋನಿಯ 30 ಪ.ಜಾ. ಕುಟುಂಬಗಳೂ ಸೇರಿದಂತೆ ಸುಮಾರು 50 ಬಡ ಕುಟುಂಬಗಳು ಗ್ರಾ.ಪಂ. ಸರಬರಾಜು ಮಾಡುವ ನಳ್ಳಿ ನೀರನ್ನೇ ಅವಲಂಬಿಸುತ್ತಿದ್ದು, ಇದೀಗ ಗ್ರಾಪಂ ಆಡಳಿತ ಯಾವುದೇ ನಿರ್ಣಯ ಕೈಗೊಳ್ಳದಿದ್ದರೂ ಯಾವುದೇ ಮುನ್ಸೂಚನೆಯಾಗಲಿ ನೋಟೀಸ್ ಆಗಲಿ ನೀಡದೆ ಪಂಪು ಚಾಲಕ ಸ್ಥಳೀಯ ಕೆಲವು ಕಡು ಬಡ ಕುಟುಂಬಗಳ ಮನೆಗಳ ನಳ್ಳಿ ಸಂಪರ್ಕವನ್ನು ಅಕ್ರಮವಾಗಿ ಕಡಿತಗೊಳಿಸಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಲೆಬೆಟ್ಟು ಜನತಾ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತ ಮಹಿಳೆ ಇರುವ ಕಡು ಬಡ ದಲಿತ ಕುಟುಂಬದ ಮನೆಯ ನಳ್ಳಿ ಸಂಪರ್ಕವನ್ನೂ ಅಮಾನವೀಯವಾಗಿ ಕಡಿತಗೊಳಿಸಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಕೆಲವು ಬಡ ದಲಿತ ಕುಟುಂಬಗಳೂ ಸೇರಿದಂತೆ ಇತರ ಬಡ ಫಲಾನುಭವಿ ಕುಟುಂಬಗಳು ಗ್ರಾ.ಪಂ. ಸರಬರಾಜು ಮಾಡುವ ಕುಡಿಯುವ ನೀರಿನ ಬಿಲ್ ಪಾವತಿ ಬಾಕಿ ಮಾಡಿರುವ ನೆಪ ಹೇಳಿ, ಪಂಪು ಚಾಲಕ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸುತ್ತಿರುವುದಾಗಿತಿಳಿಸಿದ್ದರೂ ಈ ಬಗ್ಗೆ ಗ್ರಾಪಂ ಆಡಳಿತ ಯಾವುದೇ ಅಧಿಕೃತ ಸಭೆ ನಡೆಸಿಯೂ ಇಲ್ಲ, ನಿರ್ಣಯವನ್ನೂ ಕೈಗೊಂಡಿರುವುದಿಲ್ಲಯಾವುದೇ ನೋಟೀಸೂ ನೀಡಿರುವುದಿಲ್ಲ ಎಂದು ಸ್ಥಳೀಯ ಫಲಾನುಭವಿಗಳು ತಿಳಿಸಿದ್ದಾರೆ.
ಇಲ್ಲಿನ ಬಹುತೇಕ ಬಡ ಕುಟುಂಬಗಳಿಗೆ ಗ್ರಾ.ಪಂ. ನಳ್ಳಿ ನೀರು ಅಲ್ಲದೆ ಕುಡಿಯುವ ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲವೆಂಬ ಸಂಗತಿ ಗೊತ್ತಿದ್ದರೂ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಿರುವುದು ಫಲಾನುಭವಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದರೂ
ಈ ಬಗ್ಗೆ ಗ್ರಾ.ಪಂ. ಆಡಳಿತ ಯಾವುದೇ ರೀತಿಯ ಅಗತ್ಯ ಸ್ಪಂದನೆ ನೀಡದಿರುವುದು ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನೀರಿನ ಬಿಲ್ ಕಟ್ಟಲು ಬಾಕಿ ಇರುವ ನಳ್ಳಿ ನೀರಿನ ಫಲಾನುಭವಿಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಕಡಿಮೆ ಬಿಲ್ ಬಾಕಿ ಇರುವ ಫಲಾನುಭವಿಗಳ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿದ್ದು, 4,000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಬಿಲ್ ಪಾವತಿಸಲು ಬಾಕಿ ಇರುವ ನಳ್ಳಿ ನೀರಿನ ಸಂಪರ್ಕವನ್ನು ಕಡಿತ ಮಾಡದೆ ಕಡು ಬಡವರಿಗೊಂದು ನ್ಯಾಯ, ಅನುಕೂಲ ಇರುವವರಿಗೊಂದು ಕಾನೂನು ಎಂಬಂತೆ ತಾರತಮ್ಯ ರಾಜಕೀಯ ಮಾಡಲಾಗುತ್ತಿದೆ ಮಾತ್ರವಲ್ಲದೆ ಮನೆಯೇ ಇಲ್ಲದ ಸರಕಾರಿ ಅಧಿಕಾರಿಯ ಖಾಸಗಿ ಜಾಗಕ್ಕೆ ಉಚಿತವಾಗಿ ಅನಧಿಕೃತ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂಬ ಆರೋಪವೂ ನೊಂದ ಫಲಾನುಭವಿಗಳಿಂದ ಕೇಳಿ ಬಂದಿದೆ.
ಈ ಬಗ್ಗೆ ಗ್ರಾಪಂ ಆಡಳಿತಕ್ಕೆ ಮನವಿ ನೀಡಿರುವ ಫಲಾನುಭವಿಗಳು ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯಲ್ಲಿ ಬಡ ಕುಟುಂಬಗಳು ಪರದಾಡುತ್ತಿದ್ದರೂ ಮುನ್ಸೂಚನೆ ನೀಡದೆ ನಿರ್ದಾಕ್ಷೀಣ್ಯವಾಗಿ ಕಡಿತಗೊಳಿಸಲಾದ ನಳ್ಳಿಗಳಿಗೆ ಕೂಡಲೇ ಮತ್ತೆ ನೀರಿನ ಸಂಪರ್ಕವನ್ನು ಒದಗಿಸಬೇಕು, ಬಿಲ್ ಕಟ್ಟಲು ಬಾಕಿ ಇರುವ ಬಡ ಕುಟುಂಬಗಳಿಗೆ ಹಂತವಾಗಿ ಬಿಲ್ ಪಾವತಿಸಲು ವಿಶೇಷ ಕಾಲಾವಕಾಶ ಕಲ್ಪಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಡಿಮೆ ರೇಟ್ ನಲ್ಲಿ ಜಟ್ಕಾ ಮಾಂಸ ಮಾರಾಟ: ಬಜರಂಗದಳ ಮುಖಂಡ ತೇಜಸ್ ಗೌಡ
ಮುಸ್ಲಿಮರ ಅಂಗಡಿಗಳ ಹೆಸರು ಬದಲಾವಣೆಗೆ ಹಿಂದೂ ಜಾಗರಣಾ ವೇದಿಕೆ ಒತ್ತಾಯ
ಆಸ್ಕರ್ ವೇದಿಕೆಯಲ್ಲಿ ನಿರೂಪಕನಿಗೆ ಕಪಾಳ ಮೋಕ್ಷ ಮಾಡಿದ್ದ ನಟ ರಾಜೀನಾಮೆ