ದಲಿತ ಯುವಕನ ಹತ್ಯೆ: ಬೇಜವಾಬ್ದಾರಿ ಹೇಳಿಕೆ ನೀಡಿದ ಅರಗ ಜ್ಞಾನೇಂದ್ರ: 2 ಲಕ್ಷ ನೆರವು ನೀಡಿದ ಜಮೀರ್ - Mahanayaka
9:35 AM Thursday 14 - November 2024

ದಲಿತ ಯುವಕನ ಹತ್ಯೆ: ಬೇಜವಾಬ್ದಾರಿ ಹೇಳಿಕೆ ನೀಡಿದ ಅರಗ ಜ್ಞಾನೇಂದ್ರ: 2 ಲಕ್ಷ ನೆರವು ನೀಡಿದ ಜಮೀರ್

dalith
06/04/2022

ಬೆಂಗಳೂರು: ದಲಿತ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದು, ಇದೀಗ ತಮ್ಮ ಹೇಳಿಕೆ ತಪ್ಪು ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.

ಉರ್ದು ಭಾಷೆ ಬರಲ್ಲ ಎಂದಿದ್ದಕ್ಕೆ ಯುವಕನ ಕೊಲೆಯಾಗಿದೆ ಎಂದು  ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಇದು ದಲಿತ ಹಾಗೂ ಮುಸ್ಲಿಮರ ನಡುವೆ ದ್ವೇಷ ಸೃಷ್ಟಿಗೆ ಕಾರಣವಾಗಿತ್ತು. ಗೃಹ ಸಚಿವರಾಗಿ ಒಂದು ಘಟನೆಯ ಸಂಪೂರ್ಣ ಮಾಹಿತಿ ಪಡೆಯದೇ ಮನಸ್ಸಿಗೆ ತೋಚಿದ ಹೇಳಿಕೆಯನ್ನು ಗೃಹ ಸಚಿವರು ನೀಡಿರುವುದು ಎಷ್ಟು ಸರಿ ಎನ್ನುವ ಆಕ್ರೋಶಗಳು ಇದೀಗ ಕೇಳಿ ಬಂದಿದೆ.

ಬೆಂಗಳೂರಿನ ಜೆ.ಜೆ.ನಗರದಲ್ಲಿ ದಲಿತ ಯುವಕ ಚಂದ್ರು  ಎಂಬಾತನನ್ನು ಉರ್ದು ಮಾತನಾಡಿಲ್ಲ ಎಂದು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ಅರಗ ಜ್ಞಾನೇಂದ್ರ ಹೇಳಿದ್ದರು.

ಮೃತ ಚಂದ್ರ ಜೆಜೆ ನಗರಕ್ಕೆ ಬೈಕ್ ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅಪರಿಚಿತರ ಯುವಕರ ಬೈಕ್ ಗೆ ಚಂದ್ರುವಿನ ಬೈಕ್ ತಗುಲಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಹತ್ಯೆ ನಡೆಸಲಾಗಿತ್ತು ಆದರೆ ಘಟನೆಯ ವಾಸ್ತವವನ್ನೇ ಮರೆಮಾಚಿದ ಸಚಿವರು ಬೇರೆಯೇ ಹೇಳಿಕೆ ನೀಡಿದ್ದರು.  ಇದೀಗ ತನ್ನ ಹೇಳಿಕೆ ತಪ್ಪಾಗಿದೆ. ತಕ್ಷಣದ ಮಾಹಿತಿಯ ಪ್ರಕಾರ ಹೇಳಿಕೆ ನೀಡಿದ್ದೇನೆಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ.




ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ,  ಗೃಹ ಸಚಿವ ಅರಗ ಜ್ಞಾನೇಂದ್ರ ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಯುವಕನ ಕೊಲೆಯಾಗಿದೆ, ಆತ ಒಬ್ಬ ದಲಿತ ಯುವಕ ಎಂದೆಲ್ಲ ಹೇಳಿಕೆ ಕೊಟ್ಟಿದ್ದಾರೆ. ಓರ್ವ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರಿಗೆ ಜವಾಬ್ದಾರಿ ಅರಿವಿಲ್ಲವೇ? ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮೃತ ಚಂದ್ರು ನಿವಾಸಕ್ಕೆ  ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ  2 ಲಕ್ಷ ವೈಯಕ್ತಿಕ ನೆರವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ.

ಇನ್ನೂ ಘಟನೆ ಸಂಬಂಧ ಹೇಳಿಕೆ ನೀಡಿರುವ ಜಮೀರ್,  ಗುಡ್ಡದಹಳ್ಳಿಯಲ್ಲಿ ರೋಲ್ ತಿನ್ನುವ ವಿಚಾರಕ್ಕಾಗಿ ಘರ್ಷಣೆ ನಡೆದಿತ್ತು. ಇದು ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘರ್ಷಣೆಯಿಂದ ತೀವ್ರವಾಗಿ ಗಾಯಗೊಂಡ ಚಂದ್ರುವಿನನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನಯುಸಿರು ಎಳೆದಿದ್ದಾನೆ ಎಂದು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಎಸ್ಸಾರ್ಟಿಸಿ ಬಸ್ಸು ಮತ್ತು ಕಾರು ಡಿಕ್ಕಿ ಇಬ್ಬರ ಸಾವು

ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಏರಿಕೆಯ ನಂತರ ಮತ್ತೊಂದು ಶಾಕಿಂಗ್ ನ್ಯೂಸ್

ಮಕ್ಕಳ ಎದುರೇ ಮಹಿಳೆಯರ ಮೇಲೆ ಅತ್ಯಾಚಾರ: ರಷ್ಯಾ ವಿರುದ್ಧ ಕ್ರಮಕೈಗೊಳ್ಳಿ, ಇಲ್ಲವೇ ವಿಶ್ವಸಂಸ್ಥೆ ಬಂದ್ ಮಾಡಿ | ಝಲೆನ್ ಸ್ಕಿ

ಕಲ್ಲಡ್ಕ ಪ್ರಭಾಕರ್ ಭಟ್ ಆರೋಗ್ಯದಲ್ಲಿ ಏರುಪೇರು: ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಪದೇ ಪದೇ ನೆಟ್ಟಿಗೆ ತೆಗೆಯುವ ಅಭ್ಯಾಸ ಹೊಂದಿದ್ದೀರಾ?: ಇದು ಎಷ್ಟು ಅಪಾಯಕಾರಿ?

 

ಇತ್ತೀಚಿನ ಸುದ್ದಿ