ದಲಿತ ಬಾಲಕಿಯರ ಹತ್ಯೆ; “ಯೋಗಿ ಸರ್ಕಾರ ಮಹಿಳೆಯರು ಮತ್ತು ಬಾಲಕಿಯರಿಗೆ ಶಾಪ”
19/02/2021
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮಹಿಳೆಯರು ಮತ್ತು ಬಾಲಕಿಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ವಕ್ತಾರೆ ಅಲ್ಕಾ ಲಾಂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ರಾಸ್ ಘಟನೆಯ ನಂತರ ಈಗ ಉನ್ನಾವೂ. ಮಹಿಳೆಯರು ಮತ್ತು ಬಾಲಕಿಯರ ರಕ್ಷಣೆಗೆ ಸರ್ಕಾರ ವಿಫಲವಾಗಿದೆ. “ಬೇಟಿ ಬಚಾವೋ” ಎನ್ನುವ ಘೋಷಣೆ ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ನೀಡಿದ ಬೆದರಿಕೆಯಂತೆ ತೋರುತ್ತಿದೆ ಎಂದು ಅವರು ಹೇಳಿದರು.
ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದರೆ, ಬಲಿಪಶುಗಳ ಕುಟುಂಬಸ್ಥರನ್ನು ಪೊಲೀಸ್ ಠಾಣೆಯಲ್ಲಿ ಇರಿಸಿ ಥಳಿಸಲಾಗುತ್ತಿದೆ. ಉತ್ತರ ಪ್ರದೇಶವು ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಅಪರಾಧದ ಕೇಂದ್ರ ಬಿಂದುವಾಗಿದೆ ಎಂದು ಅವರು ಹೇಳಿದರು.