ದಲಿತ ಮಹಿಳೆಯರು ಪ್ರವೇಶಿಸಿದ ದೇವಸ್ಥಾನಕ್ಕೆ ಬೀಗ: ನಾಪತ್ತೆಯಾದ ಧರ್ಮ ರಕ್ಷಕರು! - Mahanayaka
9:24 PM Wednesday 5 - February 2025

ದಲಿತ ಮಹಿಳೆಯರು ಪ್ರವೇಶಿಸಿದ ದೇವಸ್ಥಾನಕ್ಕೆ ಬೀಗ: ನಾಪತ್ತೆಯಾದ ಧರ್ಮ ರಕ್ಷಕರು!

yadagiri
31/05/2022

ಯಾದಗಿರಿ: ಹಿಂದುತ್ವದ ಧರ್ಮ ಯುದ್ಧ ನಡೆಯುತ್ತಿರುವುದರ ನಡುವೆಯೇ ಹಿಂದೂ ಧರ್ಮದೊಳಗಿರುವ ಅನಿಷ್ಠ ಪದ್ಧತಿಯಾದ ಜಾತಿ ಯುದ್ಧ ಆರಂಭವಾಗಿದ್ದು, ಪ್ರಮುಖ ಹಿಂದೂ ಸಂಘಟನೆಗಳ ಮುಖಂಡರು ಘಟನೆಯ ಕುರಿತು ಮೌನ ವಹಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯ ದಲಿತ ಮಹಿಳೆಯರು ಅಮಲಿಹಾಳ ಗ್ರಾಮದ ದೇವಸ್ಥಾನಕ್ಕೆ ಪೊಲೀಸ್ ಭದ್ರತೆಯೊಂದಿಗೆ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ಮೇ 28ರಿಂದ ಆಂಜನೇಯ ದೇವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಈ ಮೂಲಕ ಅಸ್ಪೃಶ್ಯತೆ ಆಚರಣೆ ಮತ್ತೆ ಮುಂದುವರಿದಿದೆ.

ದಲಿತರು ದೇವಸ್ಥಾನ ಪ್ರವೇಶಿಸಿದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳಲ್ಲಿ ಉದ್ವಿಗ್ನದ ವಾತಾವರಣ ಸೃಷ್ಠಿಯಾಗಿದೆ. ನಾವು ಮೇಲ್ಜಾತಿಯವರು ಅಂತ ಅಂದುಕೊಂಡಿರುವ ಕೆಲವು ಹಿಂದೂಗಳು ದೇವಸ್ಥಾನ ಪ್ರವೇಶಕ್ಕೆ ದಲಿತರು ಮುಂದಾದರೆ, ಭಾರೀ ದಾಳಿ ಮಾಡುವ ಸಂಚು ಕೂಡ ಹೂಡಿದ್ದರು ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ ಜಾತಿಪೀಡಕರು,  ದಲಿತರನ್ನು ಗ್ರಾಮಕ್ಕೆ ಪ್ರವೇಶಿಸಲು ಬಿಡಬಾರದು, ಜೈಲಿಗೆ ಹೋದರೂ, ಪರವಾಗಿಲ್ಲ, ಪೊಲೀಸರು ಬಂದರೆ ಅವರ ಮೇಲೂ ದಾಳಿ ಮಾಡಬೇಕು ಎಂದು ಯೋಜನೆ ರೂಪಿಸಿದ್ದರು. ಬಡಿಗೆ, ಖಾರದ ಪುಡಿ, ಕಲ್ಲುಗಳನ್ನು ಸಂಗ್ರಹಿಸಿಟ್ಟು ಸಿದ್ಧವಾಗಿದ್ದರು ಎನ್ನಲಾಗಿದೆ. ಆದರೆ ಇತ್ತ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಧೈರ್ಯಕಳೆದುಕೊಂಡಿ ಕಿಡಿಗೇಡಿಗಳು ಸುಮ್ಮನಾಗಿದ್ದರು ಎನ್ನಲಾಗಿದೆ.

ಸ್ವಧರ್ಮೀಯರನ್ನೇ ದೇವಸ್ಥಾನದೊಳಗೆ ಬಿಡದೇ ಹಿಂದುತ್ವದ ಬೋಧನೆ ಮಾಡುವ ರಾಜ್ಯದ ಹಿಂದುತ್ವ ಸಂಘಟನೆಗಳ ನಾಯಕರಿಗೆ ಇಂತಹ ಘಟನೆಗಳಿಂದ ನಾಚಿಕೆಯಾಗಲ್ವಾ?  ಧರ್ಮ ರಕ್ಷಣೆ ಅಂತ ಡೈಲಾಗ್ ಹೊಡೆಯುವ ಬಿಜೆಪಿ ನಾಯಕರಿಗೆ ಈ ಘಟನೆ ಕಾಣ್ತಾನೇ ಇಲ್ವಾ?  ಎನ್ನುವ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆ್ಯಂಬುಲೆನ್ಸ್-ಟ್ರಕ್ ನಡುವೆ ಭೀಕರ ಅಪಘಾತ: ರೋಗಿ ಸಹಿತ 7 ಮಂದಿ ಸಾವು

9 ವರ್ಷದಿಂದ ಪ್ರೀತಿಸಿದವಳು ಮೋಸ ಮಾಡಿದಳು: ಆತ್ಮಹತ್ಯೆಗೆ ಶರಣಾದ ಯುವಕ

ಆರ್ಯನ್ ಖಾನ್ ಪ್ರಕರಣದ ವಿವಾದಿತ ಅಧಿಕಾರಿ ಸಮೀರ್ ವಾಂಖೆಡೆ ವರ್ಗಾವಣೆಯಾಗಿದ್ದೆಲ್ಲಿಗೆ?

ಹಣ ನೀಡಿ ನಿಮ್ಮನ್ನು ಸಚಿವರಾಗಿ ಮಾಡ್ತೇವೆ ಅಂದಿದ್ರು: ಹೊಸ ಬಾಂಬ್ ಸಿಡಿಸಿದ ರೇಣುಕಾಚಾರ್ಯ

ಇತ್ತೀಚಿನ ಸುದ್ದಿ