ದಲಿತ ಯುವಕನ ಕುದುರೆ ಸವಾರಿಗೆ ಅಡ್ಡಿಪಡಿಸಿದ 9 ಮಂದಿಗೆ 5 ವರ್ಷ ಜೈಲೂಟ | ದೌರ್ಜನ್ಯದ ವಿರುದ್ಧ ದೊರಕಿತು ನ್ಯಾಯ
ಅಹ್ಮದಾಬಾದ್: ಗುಜರಾತ್ ನ ಗಾಂಧಿನಗರ ಜಿಲ್ಲೆಯ ಪಾರ್ಸಾ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ದಲಿತ ವರ, ಕುದುರೆ ಸವಾರಿ ಮಾಡುವುದನ್ನು ನಿಲ್ಲಿಸಿದ್ದ ಒಂಬತ್ತು ಆರೋಪಿಗಳಿಗೆ ಇಲ್ಲಿನ ಸೆಷೆನ್ಸ್ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
2018ರಲ್ಲಿ ಈ ಘಟನೆ ನಡೆದಿದ್ದು, ದರ್ಬಾರ್ ಸಮುದಾಯಕ್ಕೆ ಸೇರಿದ ಆರೋಪಿಗಳು, ಮದುವೆ ಮೆರವಣಿಗೆಗೆ ಅಡ್ಡಿ ಪಡಿಸಿದ್ದರು. ಇದಾದ ಬಳಿಕ ದಲಿತ ವರ ಪೊಲೀಸರ ರಕ್ಷಣೆ ಪಡೆದುಕೊಂಡು ತನ್ನ ಮದುವೆ ಮೆರವಣಿಗೆ ನಡೆಸುವಂತಾಗಿತ್ತು.
ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಬಳಿಕ ಸೆಷೆನ್ಸ್ ನ್ಯಾಯಾಧೀಶರಾದ ಎಸ್.ಎನ್. ಸೋಂಲಕಿ ಅವರು, ಕ್ರಿಮಿನಲ್ ಬೆದರಿಕೆ, ಅಸಹನೆ, ಕಾನೂನುಬಾಹಿರ ಸಭೆ ಮತ್ತು ದೌರ್ಜನ್ಯ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರು ಎಂದು ಪರಿಗಣಿಸಿ, 5 ವರ್ಷಗಳ ಜೈಲುಶಿಕ್ಷೆಯ ಜತೆಗೆ ರೂ. 10 ಸಾವಿರ ದಂಡವನ್ನೂ ವಿಧಿಸಿದ್ದಾರೆ. ಶಿಕ್ಷೆ ಪ್ರಕಟಿಸಿರುವುದನ್ನು ದೃಢಪಡಿಸಿರುವ ಸಾರ್ವಜನಿಕ ಅಭಿಯೋಜಕರಾದ ಪಿ.ಡಿ. ವ್ಯಾಸ್ ಅವರು, ತೀರ್ಪಿನ ಪ್ರತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
2018ರ ಜೂನ್ 17ರಂದು ಪಾರ್ಸಾ ಗ್ರಾಮದಲ್ಲಿ ಪ್ರಶಾಂತಿ ಸೋಲಂಕಿ ಎಂಬವರು ಮದುವೆ ಹಿನ್ನೆಲೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ವಧುವಿನ ಮನೆಗೆ ಹೋಗುವ ಮಾರ್ಗಮಧ್ಯೆ ಬಾರ್ಬರ್ ಸಮುದಾಯದ ಗುಂಪು ಮೆರವಣಿಗೆಯನ್ನು ತಡೆದಿದ್ದು, ನಮ್ಮ ಸಮುದಾಯದವರು ಮಾತ್ರವೇ ಕುದುರೆ ಸವಾರಿ ಮಾಡಬೇಕು ಎಂದು ಗಲಾಟೆ ನಡೆಸಿದ್ದರು. ಘಟನೆ ಸಂಬಂಧ 9 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.
ಇನ್ನಷ್ಟು ಸುದ್ದಿಗಳು…
ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ | ನಾಲ್ವರು ಸಾವು, ಹಲವರು ನಾಪತ್ತೆ
ಎರಡು ದಿನಗಳಲ್ಲಿ 16 ಮಂದಿಯ ನಿಗೂಢ ಸಾವು | ಬೆಚ್ಚಿಬಿದ್ದ ಗ್ರಾಮಸ್ಥರು
ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ? ಕೊಲೆಯೋ?
ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ?
ಜನಸಂಖ್ಯೆ ನಿಯಂತ್ರಿಸಲು ಮುಂದಿನ 20 ವರ್ಷ ವಿವಾಹವನ್ನೇ ನಿಷೇಧಿಸಿ: ಯೋಗಿಗೆ ತಿರುಗೇಟು ನೀಡಿದ ಸಂಸದ