ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ - Mahanayaka
7:22 AM Thursday 12 - December 2024

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರ ಸಮಸ್ಯೆ ಪರಿಹಾರಕ್ಕೆ ಒಂದಾದ ಸಂಘಟನೆಗಳು: ಮಹತ್ವದ ಸಭೆ

dalith meeting tumakuru
25/10/2021

ತುಮಕೂರು: ತುಮಕೂರು ನಗರ ಮತ್ತು ಗ್ರಾಮಾಂತರ  ಪ್ರದೇಶಗಳಲ್ಲಿ ದಲಿತರ ಹಳ್ಳಿಗಳಲ್ಲಿ ಇರುವ ಸಮಸ್ಯೆಗಳು, ಕುಂದುಕೊರತೆಗಳ ಕುರಿತು ವಿವಿಧ ಸಂಘಟನೆಗಳ ಮುಖಂಡರು ತುಮಕೂರು ಜಿಲ್ಲೆಯ ಅಮಾನಿಕೆರೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಚರ್ಚೆ ನಡೆಸಿದರು.

ಬೆಳ್ಳಿಬಟ್ಲಹಳ್ಳಿಯಲ್ಲಿ ಊರ್ಡಿಗೆರೆ ತಾಲ್ಲೂಕು ಮತ್ತು ಗ್ರಾಮದಲ್ಲಿ ಸಾರ್ವಜನಿಕರು ಓಡಾಡಲು ರಸ್ತೆ ಇಲ್ಲದೆ ಇರುವುದರ ಬಗ್ಗೆ ಮತ್ತು ಗೂಳೂರು ಹೋಬಳಿ ತುಮಕೂರು ತಾಲ್ಲೂಕು ಕೋಡಿಪಾಳ್ಯ ಗ್ರಾಮದ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮುಖಂಡರು ಚರ್ಚೆ ನಡೆಸಿದರು.

ಈ ಗ್ರಾಮಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವುದು ಹಾಗೂ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸದೇ ನಿರ್ಲಕ್ಷ್ಯ ತೋರಿದರೆ, ತೀವ್ರ ಪ್ರತಿಭಟನೆಯನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ನಟರಾಜು ಜಿ.ಎಲ್., ಅಖಿಲ ಭಾರತ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ನಿಧಿಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಪಿ.ಎನ್.ರಾಮಯ್ಯ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ರಾಜೇಶ್ ಹಾಗೂ ನರಸಿಂಹ ರಾಜು ಮತ್ತು ವಿವಿಧ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಶಾಲೆಗೆ ಹೊರಟ ಪುಟಾಣಿಗಳು: ಇಂದಿನಿಂದ 1ರಿಂದ 5ನೇ ತರಗತಿಗಳು ಪ್ರಾರಂಭ

ಅಕ್ಟೋಬರ್ 25ರಂದು ಮಂಗಳೂರಿನಲ್ಲಿ ‘ಸಂವಿಧಾನ ದೀಕ್ಷೆ’ ಕಾರ್ಯಕ್ರಮ

ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಅಮೃತ ಭಾರತಿ ವಿದ್ಯಾಲಯ ಹೆಬ್ರಿಯ ಕನ್ನಡ ಶಿಕ್ಷಕ  ಮಹೇಶ ಹೈಕಾಡಿ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ

ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಜಿಮ್ ಟ್ರೈನರ್!

ಫೋಟೋ ಹಾಕಿಲ್ಲ ಅಂತ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೇ ಬಂದಿಲ್ಲ, ಇನ್ನು ಸಿಎಂ ಸ್ಥಾನ ಬಿಡ್ತಾರಾ? | ಕುಮಾರಸ್ವಾಮಿ ಪ್ರಶ್ನೆ

ಇತ್ತೀಚಿನ ಸುದ್ದಿ