ಬೆಂಗಳೂರಿನಲ್ಲಿ ಇಂಟರ್ ನೆಟ್ ಫೈಬರ್ ಕೇಬಲ್ ಗೆ ಹಾನಿ: ಸಿಒಎಐ ಮಹಾನಿರ್ದೇಶಕ ಕೊಚ್ಚರ್ ಆತಂಕ - Mahanayaka
2:13 PM Thursday 26 - December 2024

ಬೆಂಗಳೂರಿನಲ್ಲಿ ಇಂಟರ್ ನೆಟ್ ಫೈಬರ್ ಕೇಬಲ್ ಗೆ ಹಾನಿ: ಸಿಒಎಐ ಮಹಾನಿರ್ದೇಶಕ ಕೊಚ್ಚರ್ ಆತಂಕ

internet fiber cable
20/11/2024

ನವದೆಹಲಿ: ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ಡಾ ಎಸ್.ಪಿ. ಕೊಚ್ಚರ್ ಅವರು ಬುಧವಾರದಂದು ದೆಹಲಿಯಲ್ಲಿ ಮಾತನಾಡಿ, “ಭಾರತದ ಪ್ರೀಮಿಯಂ ನಗರ ಬೆಂಗಳೂರು. ಅದು ಭಾರತದ ಶೋಕೇಸ್ ನಗರ. ಅಂದರೆ ಜಗತ್ತಿಗೆ ಭಾರತ ಅಂದರೆ ಏನು ಎಂದು ತೆರೆದುಕೊಳ್ಳುವಂಥ ನಗರವಾಗಿದೆ. ಜೊತೆಗೆ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಸಹ ಹೌದು. ಅದು ನಮ್ಮ ಕಡೆಯಿಂದಲೇ ಆಗಲೀ ಅಥವಾ ಸರ್ಕಾರದ ಕಡೆಯಿಂದಲೇ ಆಗಲೀ ನಾವು ಭಾಗೀ ಆಗುವಂಥ ವಿಚಾರಗಳು ವರ್ಚಸ್ಸಿಗೆ ಮಸಿ ಬಳಿಯುವಂತೆ ಆಗಿರಬಾರದು. ಅಲ್ಲಿ ಈಗ ಜಿಸಿಸಿ ಸಭೆಯು ನಡೆಯುತ್ತಿದೆ. ಇದು ಕೇಬಲ್ ಕತ್ತರಿಸುವುದಕ್ಕೆ ಸರಿಯಾದ ಸಮಯವಂತೂ ಅಲ್ಲ. ಇದು ಕಳೆದ ಹಲವು ವರ್ಷಗಳಿಂದ ಹಾಗೇ ಇರುವಂಥ ಸಮಸ್ಯೆಯಾಗಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರದ ಜೊತೆಗೆ ಮಾತುಕತೆ ನಡೆಸುತ್ತಾ ಬರುತ್ತಿದ್ದೇವೆ,” ಎಂದು ಹೇಳಿದ್ದಾರೆ.

ಫೈಬರ್ ಕೇಬಲ್ ಅನ್ನು ನೆಲದ ಮೇಲೆ ತೆಗೆದುಕೊಂಡು ಹೋಗುವುದಕ್ಕಾಗಿ ನಾವು ಅವುಗಳನ್ನು ಕ್ರಮಬದ್ಧಗೊಳಿಸಲು ಅಥವಾ ಅನುಮತಿಸಲು ಮನವಿಯನ್ನು ಮಾಡುತ್ತಲೇ ಬರುತ್ತಿದ್ದೇವೆ. ಬೆಂಗಳೂರಿನಲ್ಲೂ ಮೂಲಸೌಕರ್ಯ ಬೆಳೆಯುತ್ತಲೇ ಇದೆ. ಮತ್ತು ಹಲವು ಕಡೆಗಳಲ್ಲಿ ಅಗೆಯುವುದನ್ನು, ಇನ್ನೂ ಹಲವು ಕೆಲಸಗಳನ್ನು ಮಾಡುತ್ತಿರುವುದು ಕಾಣಬಹುದು. ವಿವಿಧ ಸ್ಥಳಗಳಲ್ಲಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಆದ್ದರಿಂದಾಗಿಯೇ ಈಗಿರುವಂಥ ಫೈಬರ್ ಕೇಬಲ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಲ್ಲಿ ಮತ್ತೆ ಅಗೆಯುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮತ್ತೆ ಬೇರೆ ಬೇರೆ ಕೆಲಸಗಳು ಆಗುತ್ತಲೇ ಇವೆ. ಎಲ್ಲಿ ಫೈಬರ್ ಅನ್ನು ನೆಲದ ಅಡಿಯಲ್ಲಿ ಹುಗಿಯುವುದಕ್ಕೆ ಸಮಯ ತೆಗೆದುಕೊಳ್ಳುತ್ತದೋ ಅಂಥ ಕಡೆಗಳಲ್ಲಿ ಬೇರೆ ಸಂವಹನದ ವ್ಯವಸ್ಥೆ ಮಾಡಿಕೊಡಬೇಕಿದೆ ಎಂದಿದ್ದಾರೆ.

ಮತ್ತು ಎಲ್ಲಿ ಅಲ್ಪ ಕಾಲದ ಒಳಗಾಗಿ ಅನುಮತಿ ದೊರೆಯುವುದು ಆಗುವುದಿಲ್ಲವೇ ಆದರೂ ನಾವು ಅನುಮತಿಗೆ ಅರ್ಜಿ ಹಾಕಿಕೊಂಡಿರಬೇಕು. ಕೆಲವು ಸಲ ಅದಕ್ಕೆ ನಮಗೆ ಅನುಮತಿ ಸಿಕ್ಕಿಬಿಡುತ್ತದೆ, ಮತ್ತೆ ಕೆಲವು ಸಲ ಸಿಗುವುದಿಲ್ಲ. ಆದ್ದರಿಂದ ನಾವು ಅದನ್ನು ನೆಲದ ಮೇಲೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಅದಕ್ಕಾಗಿಯೇ ನೆಲದ ಮೇಲೆ ಕ್ರಮಬದ್ಧಗೊಳಿಸುವುದಕ್ಕೆ ಸಹ ಅರ್ಜಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಅಂದ ಹಾಗೆ, ವಿವಿಧ ಇಂಟರ್ ನೆಟ್ ಸೇವೆ ಒದಗಿಸುವ ಹಾಗೂ ಟೆಲಿಕಾಂ ಆಪರೇಟರ್ ಕಂಪನಿಗಳ ಫೈಬರ್ ಗಳ ಕೇಬಲ್ ಕತ್ತರಿಸಿರುವುದು ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಐಟಿ ಮೇಳ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂಥ ಅಪಸವ್ಯಗಳು ಆಗುವುದರಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ವರ್ಚಸ್ಸಿಗೆ ಪೆಟ್ಟು ಬಿದ್ದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಸಿಒಎಐ ಮಹಾ ನಿರ್ದೇಶಕ ಕೊಚ್ಚರ್ ಅವರ ಹೇಳಿಕೆ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ