ಖ್ಯಾತ ನಟಿ ನಯನತಾರಾ, ವಿಘ್ನೇಶ್ ಶಿವ ಅದ್ದೂರಿ ವಿವಾಹ
ನಟಿ ನಯನತಾರಾ, ನಿರ್ದೇಶಕ ಮತ್ತು ನಿರ್ಮಾಪಕ ವಿಘ್ನೇಶ್ ಶಿವನ್ ಇಂದು ವಿವಾಹವಾಗಲಿದ್ದಾರೆ. ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ರೆಸಾರ್ಟ್‌ನಲ್ಲಿ ಹಿಂದೂ ಸಂಪ್ರದಾಯದಲ್ಲಿ ಸಮಾರಂಭಗಳು ನಡೆಯುತ್ತವೆ. ದಂಪತಿಯ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮಾಧ್ಯಮದವರಿಗೂ ಸೇರಿದಂತೆ ಇತರ ಯಾರಿಗೂ ಸ್ಥಳಕ್ಕೆ ಪ್ರವೇಶವಿಲ್ಲ.
ಮದುವೆಯ ಫೋಟೋಗಳನ್ನು ಮಧ್ಯಾಹ್ನದ ವೇಳೆಗೆ ಬಿಡುಗಡೆ ಮಾಡುವುದಾಗಿ ವಿಘ್ನೇಶ್ ಶಿವನ್ ಘೋಷಿಸಿದ್ದಾರೆ. ಇಬ್ಬರೂ ಶನಿವಾರ ಮಾಧ್ಯಮದವರನ್ನು ಭೇಟಿಯಾಗಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನಿರ್ದೇಶಕ ಗೌತಮ್ ಮೆನನ್ ಮದುವೆಯ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮದುವೆಯ ಪ್ರಸಾರದ ಹಕ್ಕನ್ನು OTT ಒಡೆತನದ ನೆಟ್ ಫ್ಲಿಕ್ಸ್ ಗೆ ನೀಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋಲ್ಡ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿ: ಮೆಕ್ ಡೊನಾಲ್ಡ್ಸ್ ಗೆ ವಿಧಿಸಿದ ದಂಡ ಎಷ್ಟು ಗೊತ್ತಾ?
ಪ್ರೇಯಸಿಯ ಮೇಲಿನ ಕೋಪದಿಂದ ಮ್ಯೂಸಿಯಮ್ ಗೆ ನುಗ್ಗಿ ಪ್ರಾಚೀನ ವಸ್ತುಗಳನ್ನು ಪುಡಿಗೈದ ಯುವಕ!
ಮಹಿಳೆಯನ್ನು ಬಲಿ ಪಡೆದ ಆನ್ ಲೈನ್ ರಮ್ಮಿ ಆಟ: ರಮ್ಮಿ ವ್ಯಸನಿಗಳೇ ಎಚ್ಚರ!
ರಾಜ್ಯದ ಎಲ್ಲಾ ಆರೆಸ್ಸೆಸ್ ಕಚೇರಿಗಳಿಗೆ ಪೊಲೀಸ್ ರಕ್ಷಣೆ: ಆರಗ ಜ್ಞಾನೇಂದ್ರ