ದನ ಕರುಗಳನ್ನು ಕಟ್ಟಿ ಹಾಕಿದ್ದ ಹಟ್ಟಿ ಬೆಂಕಿಗಾಹುತಿ
ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅರ್ತಲ್ಕೆ ನಿವಾಸಿ ಸೇಸಪ್ಪ ಮುಗೇರ ಎಂಬವರ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಆ.2 ರಂದು ನಡೆದಿದೆ.
ಬೆಂಕಿ ಆವರಿಸಿದ ಪರಿಣಾಮ ಮೇಲ್ಛಾವಣಿ ಸುಟ್ಟು ಹೋಗಿ, ದನ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾರ ನಷ್ಟ ಉಂಟಾಗಿದೆ.
ಮನೆಯವರು ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಪಕ್ಕದ ಮನೆಯವರು ಮನೆ ಯಜಮಾನನಿಗೆ ತಿಳಿಸಿದ್ದು, ಮನೆ ಯಜಮಾನ ಸೇಸಪ್ಪ ಮುಗೇರ ಬಂದು ನೋಡಿದಾಗ ಹಟ್ಟಿಯು ಸಂಪೂರ್ಣವಾಗಿ ಸುಟ್ಟಿದೆ. ದನ ಕರುಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಬ್ಯಾಂಕ್ ಸಾಲ ಕಟ್ಟಲು ಕೂಡಿಟ್ಟ 4 ಕ್ಷಿಂಟಾಲ್ ಅಡಿಕೆ , 3 ಕ್ವಿಂಟಲ್ ರಬ್ಬರ್ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ಹಾನಿಯಾಗಿದೆ ಇನ್ನೂ ಬ್ಯಾಂಕ್ ಸಾಲ ಕಟ್ಟುವುದು ಹೇಗೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾ.ಪಂ ಅಧಿಕಾರಿಗಳು, ಪಶುವೈದ್ಯರು ಹಾಗೂ ವಿವಿಧ ಇಲಾಖೆಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka