ಮತದಾರರನ್ನು ಸೆಳೆಯಲು ಸ್ಟೇಜ್ ನಲ್ಲಿಯೇ ಮಹಿಳೆಯ ಜೊತೆ ಬಿಜೆಪಿ ನಾಯಕ ಮಾಡಿದ್ದೇನು?
ಭೋಪಾಲ್: ಮಧ್ಯಪ್ರದೇಶದ 28 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಅಭ್ಯರ್ಥಿ ಗೋವಿಂದ್ ಸಿಂಗ್ ರಜಪುತ್ ಮತದಾನದ ಪ್ರಚಾರಕ್ಕೆ ಆಯೋಜಿಸಲಾಗಿದ್ದ ನೃತ್ಯ ಪ್ರದರ್ಶನದಲ್ಲಿ ಮಹಿಳೆಯ ಜೊತೆಗೆ ನೃತ್ಯ ಮಾಡಿದ್ದಾರೆ.
ಮತದಾರರನ್ನು ಸೆಳೆಯಲು ವೇದಿಕೆಯಲ್ಲಿ ಸೊಂಟ ಬಳುಕಿಸಿದ ಗೋವಿಂದ್ ಸಿಂಗ್ ರಜಪೂತ್ ಅವರಿಗೆ ಮಹಿಳೆಯೊಬ್ಬರು ಸಾಥ್ ನೀಡಿದ್ದಾರೆ. ಇವರಿಬ್ಬರು ನೃತ್ಯ ಮಾಡುತ್ತಿದ್ದರೆ, ಇನ್ನು ಕೆಲವರು ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು.
ಸಾಗರ್ ಜಿಲ್ಲೆಯ ಸುರ್ಕಿ ವಿಧಾನಸಭಾ ಕ್ಷೇತ್ರದಿಂದ ರಜಪುತ್ ಸ್ಪರ್ಧಿಸುತ್ತಿದ್ದಾರೆ. ಬಹುಜನ ಸಮಾಜ ಪಕ್ಷದ ಗೋಪಾಲ್ ಪ್ರಸಾದ್ ಅಹಿರ್ವಾರ್ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಮಲ್ ನಾಥ್ ನೇತೃತ್ವದ ಸರ್ಕಾರಕ್ಕೆ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಸಿಂಧಿಯಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಮಧ್ಯಪ್ರದೇಶದಲ್ಲಿ ಉಪಚುನಾವಣೆಯಾಗುತ್ತಿದೆ.
#WATCH Sagar, Madhya Pradesh: Dance performance to the tunes of folk songs of Bundelkhand seen as a part of campaigning for BJP candidate from Surkhi, Govind Singh Rajput. (29.10.2020)
Voting for the by-election to the state's legislative assembly to take place on November 3rd. pic.twitter.com/rhKa7P08j0
— ANI (@ANI) October 30, 2020