ಬಾಯಿ ಚಪ್ಪರಿಸಿ ತಿನ್ನುವ ಟೊಮೆಟೋ ಸಾಸ್ ನಲ್ಲಿ ಅಪಾಯಕಾರಿ ಅಂಶ ಪತ್ತೆ - Mahanayaka

ಬಾಯಿ ಚಪ್ಪರಿಸಿ ತಿನ್ನುವ ಟೊಮೆಟೋ ಸಾಸ್ ನಲ್ಲಿ ಅಪಾಯಕಾರಿ ಅಂಶ ಪತ್ತೆ

tomato sos
04/03/2025

Tomato Sos, ಬೆಂಗಳೂರು:  ಇಡ್ಲಿ ತಯಾರಿಕೆ ಮಾಡಲು ಬಳಸುವ ಪ್ಲಾಸ್ಟಿಕ್, ಬಟಾಣಿ ಹಾಗೂ ಕಲ್ಲಂಗಡಿಗೆ ಬಳಸುವ ಕೃತಕ ಬಣ್ಣ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಂಶಗಳನ್ನು ಹೊಂದಿದೆ ಎನ್ನುವ ವರದಿ ಇತ್ತೀಚೆಗೆ ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಟೊಮೆಟೋ ಸಾಸ್(Tomato sos)  ಕೂಡ ಇದೇ ಲಿಸ್ಟ್ ಗೆ ಸೇರ್ಪಡೆಯಾಗಿದೆ.

ಜನರು ಬಾಯಿ ಚಪ್ಪರಿಸಿ ತಿನ್ನುವ ಟೊಮೆಟೋ ಸಾಸ್ ನಲ್ಲೂ ಅಪಾಯಕಾರಿ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವುದು ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ದೃಢವಾಗಿದೆ.

ಆಹಾರಗಳಲ್ಲಿ ಬಣ್ಣ ಬಳಕೆ ಆರೋಪಗಳ ಹಿನ್ನೆಲೆ ಟೊಮೆಟೋ ಸಾಸ್ ಮಾದರಿಯನ್ನ ಪಡೆದು ಆಹಾರ ಇಲಾಖೆ ಫೆಬ್ರವರಿಯಲ್ಲಿ  ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಇದೀಗ ವರದಿ ಅಧಿಕಾರಿಗಳ ಕೈಸೇರಿದ್ದು, ವರದಿಯಲ್ಲಿ ಟೊಮೆಟೋ ಸಾಸ್ ಸುರಕ್ಷಿತವಲ್ಲ ಎಂದು ಕಂಡು ಬಂದಿರುವುದಾಗಿ ವರದಿಗಳಿಂದ ತಿಳಿದು ಬಂದಿದೆ.

ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಟೊಮೆಟೋ ಸಾಸ್ ಗಳಲ್ಲಿ ಸೋಡಿಯಂ ಬೆಂಜೋಯೇಟ್ ಎನ್ನುವ ಹಾನಿಕಾರಕ ರಾಸಾಯನಿಕ ಪತ್ತೆಯಾಗಿದೆ.  ಸಾಸ್ ಬ್ರೈಟ್ ಹಾಗೂ ಕೆಂಪಾಗಿ ಕಾಣಲು ಈ ಕೃತಕ ಬಣ್ಣವನ್ನು  ಸೇರಿಸಲಾಗುತ್ತಿದೆ. ಇದು ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ