ದಂತ ವೈದ್ಯನ ಕೈಯಿಂದ ಜಾರಿದ ಸ್ಕ್ರೂ ವೃದ್ಧನ ಶ್ವಾಸಕೋಶ ಸೇರಿತು | ಮುಂದೆ ನಡೆದದ್ದೇನು ಗೊತ್ತಾ? - Mahanayaka
8:16 PM Wednesday 11 - December 2024

ದಂತ ವೈದ್ಯನ ಕೈಯಿಂದ ಜಾರಿದ ಸ್ಕ್ರೂ ವೃದ್ಧನ ಶ್ವಾಸಕೋಶ ಸೇರಿತು | ಮುಂದೆ ನಡೆದದ್ದೇನು ಗೊತ್ತಾ?

bhopal
25/08/2021

ಭೋಪಾಲ್: ದಂತ ವೈದ್ಯನ ನಿರ್ಲಕ್ಷ್ಯದಿಂದಾಗಿ  ವೃದ್ಧರೋರ್ವರು ಅಪಾಯದಲ್ಲಿ ಸಿಲುಕಿದ ಘಟನೆ  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದ್ದು,  ದಂತ ಕಸಿ ಮಾಡುತ್ತಿದ್ದ ವೇಳೆ ವೈದ್ಯರು ನಿರ್ಲಕ್ಷ್ಯವಹಿಸಿದ್ದರಿಂದಾಗಿ ನಡೆಯಬಾರದ ಘಟನೆಯೇ ನಡೆದು ಹೋಗಿತ್ತು.

ಭೋಪಾಲ್ ನ ಖಾಸಗಿ ಕ್ಲಿನಿಕ್ ಗೆ ವೃದ್ಧರೊಬ್ಬರು ದಂತ ಕಸಿಗಾಗಿ ತೆರಳಿದ್ದಾರೆ. ಕೃತಕ ಹಲ್ಲನ್ನು ಕೂರಿಸುತ್ತಿದ್ದ ವೇಳೆ ವೈದ್ಯರ ಕೈಯಿಂದ ಸ್ಕ್ರೂ ಜಾರಿ ವೃದ್ಧನ ಗಂಟಲಿಗೆ ಹೋಗಿದ್ದು, ಬಳಿಕ ನೇರವಾಗಿ ಶ್ವಾಸಕೋಶಕ್ಕೆ ಹೋಗಿದೆ. ಸ್ಕ್ರೂ ಶ್ವಾಸಕೋಶಕ್ಕೆ ಹೋದ ತಕ್ಷಣವೇ ವೃದ್ಧ ಕೆಮ್ಮಲು ಆರಂಭಿಸಿದ್ದು, ಶ್ವಾಸಕೋಶದಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ.

ಬಳಿಕ ತಕ್ಷಣವೇ ವೃದ್ಧನನ್ನು  ಇಲ್ಲಿನ ಗಾಂಧಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು, ಇಲ್ಲಿನ ಶ್ವಾಸಕೋಶ ತಜ್ಞ ಪರಾಗ್ ಶರ್ಮಾ ಅವರು ಪರಿಶೀಲಿಸಿದಾಗ ಶ್ವಾಸಕೋಶದಲ್ಲಿ ಸ್ಕ್ರೂ ಸೇರಿರುವುದು ಪತ್ತೆಯಾಗಿದೆ. ಬಳಿಕ ಅವರು ಬ್ರಾಂಕೋಸ್ಕೋಪಿ ಮೂಲಕ ಸ್ಕ್ರೂವನ್ನು ಶ್ವಾಸಕೋಶದಿಂದ ಹೊರ ತೆಗೆದಿದ್ದಾರೆ.

ಇನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರಿಂದಾಗಿ ವೃದ್ಧನ ಪ್ರಾಣ ಉಳಿದಿದೆ. ಸ್ವಲ್ಪ ತಡವಾಗಿದ್ದರೂ ಬಹಳ ಕಷ್ಟಕರ ಸನ್ನಿವೇಶ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಈ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನಡೆಸಲು ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

56ನೇ ವಯಸ್ಸಿನಲ್ಲಿ ಮತ್ತೆ ವಿವಾಹವಾದ ಬಹುಭಾಷಾ ನಟ ಪ್ರಕಾಶ್ ರೈ

ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?

ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !

ಇತ್ತೀಚಿನ ಸುದ್ದಿ