ಧೈರ್ಯಂ ಸರ್ವತ್ರ ಸಾಧನಂ: ಒಂದು ಅದ್ಭುತ ಸಿನಿಮಾ
- ಎಲ್.ಎನ್. ಮುಕುಂದರಾಜ್
ಮಾಗಡಿ ರಸ್ತೆಯ ಸುಂಕದಕಟ್ಟೆಯಲ್ಲಿರುವ ಮಿರಾಜ್ ಸಿನಿಮಾ ಮಂದಿರದಲ್ಲಿ ಒಂದು ಅದ್ಭುತ ಸಿನಿಮಾ ನೋಡಿದೆ. ಧೈರ್ಯಂ ಸರ್ವತ್ರ ಸಾಧನಂ ಸಿನಿಮಾದ ಹೆಸರು. ಚಾರಿತ್ರಿಕ ಸತ್ಯಗಳನ್ನು ವರ್ತಮಾನದಲ್ಲಿ ಕಟ್ಟಿಕೊಡುವ ಅತ್ಯಂತ ಅರ್ಥಪೂರ್ಣ ಸಿನಿಮಾ.
ಆರ್ಯ ದ್ರಾವಿಡ ಸಂಘರ್ಷದ ಸೂಕ್ಷ್ಮಗಳು ಈ ಚಿತ್ರದಲ್ಲಿ ಅಡಕವಾಗಿವೆ. ಚರಿತ್ರೆ ಮರುಕಳಿಸುವ ಸುಡುವಾಸ್ತವೊಂದರ ಅನಾವರಣ ಇಲ್ಲಿದೆ. ಅಕ್ಷರ ಎನ್ನುವ ಆಯುಧವನ್ನು ಪಡೆದುಕೊಳ್ಳಲು ಈ ದೇಶದ ಮೂಲ ನಿವಾಸಿಗಳು ಅದೆಷ್ಟು ಕಷ್ಟಪಟ್ಟರು ಎಂಬುದನ್ನು ಈ ಚಿತ್ರ ತೋರಿಸಿಕೊಡುತ್ತದೆ. ಸಿನಿಮಾದಲ್ಲಿ ನಿರ್ದೇಶಕರು ತೋರಿಸುವ ಬಂದೂಕು ಎನ್ನುವ ಆಯುಧ ಕೇವಲ ಕೊಲ್ಲುವ ಸಾಧನವಲ್ಲ. ಅದು ಪ್ರತಿಯೊಬ್ಬ ಭಾರತೀಯನನ್ನು ಬದುಕಿಸಬಲ್ಲ, ಎಲ್ಲರೂ ಕಲಿಯಲೇಬೇಕಾದ ವಿದ್ಯೆ.
ಚಿತ್ರದಲ್ಲಿ ರೂಪಿಸಲಾದ ಪ್ರತಿ ಪಾತ್ರವು ಚಾರಿತ್ರಿಕ ಮಹತ್ವವುಳ್ಳ ಹೆಸರುಗಳು. ನಾಯಕ ರಾಹುಲ್ ದ್ರಾವಿಡ, ಪ್ರತಿನಾಯಕ ಆರ್ಯ. ಆರ್ಯನ ಸಂಗಾತಿಗಳು ಮತ್ಸ್ಯ, ಪುಷ್ಯ ಮಿತ್ರ, ಸುಮತಿ ಭಟ್ಟ, ವಾಮನ ಮುಂತಾದವರು. ದ್ರಾವಿಡನ ತಂದೆ ನಾಗದೊರೆ. ದ್ರಾವಿಡನ ಜೊತೆಗೆ ನಿಲ್ಲುವವರು ಅಂಬಿಕಾ, ಗೌರಿ, ಕಲ್ಬುರ್ಗಿ, ಬಿಜ್ಜಳ, ಬಸವಣ್ಣ, ಗೌತಮ.
ನಮ್ಮ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪುಟ್ಟ ಗ್ರಾಮವೊಂದರ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.
ಸಿನಿಮಾ ಮಂದಿರಗಳ ಕಡೆ ತಲೆ ಹಾಕದ ನಮ್ಮಂತವರು ಈಗ ಮತ್ತೆ ಕನ್ನಡ ಚಿತ್ರಗಳನ್ನು ನೋಡಲೇಬೇಕೆನ್ನುವ ಹೊಸ ಹಂಬಲವನ್ನು ಈ ಚಿತ್ರ ಸೃಷ್ಟಿಸುತ್ತದೆ. ಸಾಮಾನ್ಯ ಪ್ರೇಕ್ಷಕರಿಗೂ ಇದರ ತಿರುಳು ಅರ್ಥವಾದರೆ ನಮ್ಮ ದೇಶ, ಪ್ರಜಾಪ್ರಭುತ್ವ, ಸಂವಿಧಾನ ಎಲ್ಲವೂ ಗೆದ್ದಂತೆ. ನಿರ್ದೇಶಕ, ಕಲಾವಿದರು, ತಂತ್ರಜ್ಞರ ಪರಿಶ್ರಮ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth