ದರೋಡೆ ಮಾಡಲು ಬಂದವರ ಪರಿಸ್ಥಿತಿ ಏನಾಯ್ತು ಗೊತ್ತಾ? | ಇಲ್ಲಿದೆ ರಿಯಲ್ ಸ್ಟೋರಿ
ಚಿಕ್ಕಮಗಳೂರು: ಎಐಟಿ ಸರ್ಕಲ್ ಸಮೀಪದ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಯಲ್ಲಿ ಇಂದು ಬೆಳಗ್ಗೆ ದರೋಡೆಗೆ ಯತ್ನಿಸಿದ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದರೋಡೆಕೋರರನ್ನು ಬಂಧಿಸಲಾಗಿದೆ.
ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ನುಗ್ಗಿದ ಮುಸುಕುಧಾರಿಗಳಿಬ್ಬರು ಮನೆಯ ಮಹಿಳೆಯನ್ನ ಕಟ್ಟಿಹಾಕಿ ದರೋಡೆಗೆ ಯತ್ನಿಸುತ್ತಿದ್ದರು. ಈ ವೇಳೆ ಮನೆಗೆ ಮಹಿಳೆಯ ಪುತ್ರ ಬರುತಿದ್ದಂತೆ ದರೋಡೆಕೋರರು ಬೆಚ್ಚಿಬಿದ್ದಿದ್ದಾರೆ.
ದರೋಡೆಕೋರರನ್ನು ನೋಡಿದ ತಕ್ಷಣ ಮಹಿಳೆಯ ಪುತ್ರ ಬೊಬ್ಬೆ ಹೊಡೆದು ಸ್ದಳೀಯರನ್ನು ಸಹಾಯಕ್ಕಾಗಿ ಕೂಗಿದ್ದಾನೆ. ಈ ವೇಳೆ ಎಚ್ಚೆತ್ತ ದರೋಡೆಕೋರರು. ಕೈಯಲ್ಲಿ ಚೂರಿ ಹಿಡಿದು ಸಮೀಪ ಬಾರದಂತೆ ಬೆದರಿಸಿ, ಬಂದು ಬೈಕ್ ಹತ್ತಿ ಪರಾರಿಯಾಗಲು ಯತ್ನಿಸಿದ್ದಾರೆ.
ಇದೇ ಸಮಯದಲ್ಲಿ ಇದೇ ದಾರಿಯಲ್ಲಿ ಅಗ್ನಿಶಾಮಕ ದಳದ ವಾಹನ ಬಂದಿದ್ದು, ಈ ವೇಳೆ ದರೋಡೆಕೋರರು ಚಾಕು ಹಿಡಿದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂದು ಅರಿತ ಚಾಲಕ ಬೈಕ್ ನ್ನು ಅಡ್ಡಗಟ್ಟಿ ವಾಹನವನ್ನು ಬೈಕ್ ಗೆ ತಾಗಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದಿದ್ದು, ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಸಂಬಂಧಿಕರಿಂದಲೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.